ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ತಾಲೂಕಿನ ಮುಡುಬದ ಚಾಮುಂಡೇಶ್ವರಿ ದೇವಸ್ಥಾನದ ಪಕ್ಕ ಕಾರು ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿದೆ. ಪರಿಣಾಮ ಒಬ್ಬ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
READ | ಭದ್ರಾವತಿಯಲ್ಲಿ ಬಿಗುವಿನ ವಾತಾವರಣ, ಅಂಗಡಿ ಮೇಲೆ ಕಲ್ಲು ತೂರಾಟ
ತರೀಕೆರೆ ತಾಲೂಕಿನ ಸಂಪತ್ ಕುಮಾರ್(42) ಎಂಬಾತ ಮೃತ. ಕುಟುಂಬ ಸಹಿತ ಮೂಡುಬಿದರೆಯಿಂದ ತರೀಕೆರೆಗೆ ಆಗಮಿಸುತ್ತಿದ್ದಾಗ ಘಟನೆ ನಡೆದಿದೆ. ಕಾರು ನಿಯಂತ್ರಣ ತಪ್ಪಿದ್ದು, ತಗ್ಗಿಗೆ ಉರುಳಿ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಂಪತ್ ಮೃತಪಟ್ಟಿದ್ದು, ಇವರ ಪತ್ನಿ ಮತ್ತು ಮಗನಿಗೆ ಗಾಯಗಳಾಗಿವೆ. ಮಾಳೂರು (Malur) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.