ವಾರಂಬಳ್ಳಿ ಗ್ರಾಮವನ್ನು ಸ್ವಚ್ಚಗೊಳಿಸಿ ಮಾದರಿಯಾದ ಯುವಕರ ತಂಡ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

 

 

ಸುದ್ದಿ ಕಣಜ.ಕಾಂ
ಹೊಸನಗರ: ಸ್ವಚ್ಛ ಗ್ರಾಮದ ಕನಸನ್ನು ಸಾಕಾರಗೊಳಿಸುವಲ್ಲಿ ಯುವಕರ ತಂಡ ನಿರಂತರ ಕಾರ್ಯ ಪ್ರವೃತ್ತವಾಗಿದೆ‌. ಗ್ರಾಮದ ಬೀದಿಗಳಲ್ಲಿ ಬಿಸಾಡಿದ ತ್ಯಾಜ್ಯವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇ ಮಾಡುವ ಕೆಲಸ ಸದ್ದಿಲ್ಲದೆ ನಡೆದಿದೆ.

READ | ಸೋಮವಾರದಿಂದ ಲಾಕ್‍ಡೌನ್ ಇನ್ನಷ್ಟು ಸಡಿಲಿಕೆ, ಮಾಲ್, ದೇವಸ್ಥಾನ ತೆರೆಯಲು ಅವಕಾಶ, ನೈಟ್ ಕರ್ಫ್ಯೂ ಇರಲ್ಲ, ಏನೇನು ನಿಯಮ ಅನ್ವಯ, ಇಲ್ಲಿದೆ ಮಾಹಿತಿ

ಈ‌ ಸ್ವಚ್ಚ ಗ್ರಾಮದ ಕಲ್ಪನೆ ಆರಂಭವಾಗಿದ್ದೇ ‘ನನ್ನ ಊರು ಸ್ವಚ್ಛ ಊರು’ ಶೀರ್ಷಿಕೆ ಅಡಿ. ಇಡಿ ವಾರಂಬಳ್ಳಿ ಊರನ್ನು ಸ್ವಚ್ಚ ಮಾಡಲಾಗಿದೆ. ಗೊರದಳ್ಳಿಯಿಂದ ಆರಂಭವಾದ ಸ್ವಚ್ಛತೆ ವಾರಂಬಳ್ಳಿ ಶಾಲೆ, ರಸ್ತೆ ಬದಿಯನ್ನು ಸ್ವಚ್ಛ ಮಾಡುವ ಮೂಲಕ‌ ಸಾಗಿತು.
ಶುಭ ಕೋರಿದ ಶಿಕ್ಷಕರು, ಹಿರಿಯರು | ಸರ್ಕಾರಿ ಪ್ರೌಢ ಶಾಲೆಯ ಗುರುಗಳು ಮತ್ತು ಗ್ರಾಮದ ಹಿರಿಯರು ವಾರಂಬಳ್ಳಿಯ ಯುವ ತಂಡದ ಕಾರ್ಯವನ್ನು‌ ಶ್ಲಾಘಿಸಿದರು.
ವಿನಾಯಕ್ ಪ್ರಭು‌ ಸೇರಿದಂತೆ ಗ್ರಾಮದ ಯುವಕರು ಈ ಕಾರ್ಯದಲ್ಲಿ ಪಾಲ್ಗೊಂಡು ಸ್ವಚ್ಚ ಗ್ರಾಮದ ಕಲ್ಪನೆಗೆ ಮೂರ್ತ ಸ್ವರೂಪ‌ ನೀಡಿದರು.

error: Content is protected !!