ಜೋಗ, ಸಿಗಂದೂರು, ಚಿತ್ರದುರ್ಗಕ್ಕೆ ಟೂರ್ ಪ್ಯಾಕೇಜ್, ಶುಲ್ಕ ಎಷ್ಟು?

 

 

ಸುದ್ದಿ ಕಣಜ.ಕಾಂ

ಬೆಂಗಳೂರು: ಬೆಂಗಳೂರಿನಿಂದ ಜೋಗಕ್ಕೆ ಬಿಡಲಾಗಿದ್ದ ಬಸ್ಸಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದೇ ಕೆ.ಎಸ್.ಆರ್.ಟಿ.ಸಿ. ಮತ್ತೊಮ್ಮೆ ಟೂರ್ ಪ್ಯಾಕೇಜ್ ಬಿಡುಗಡೆ‌ ಮಾಡಿದೆ. ಈ ಪ್ಯಾಕೇಜ್ ಜುಲೈ 30ರಿಂದಲೇ‌ ಆರಂಭಗೊಂಡಿದೆ.

ಬೆಂಗಳೂರಿನಿಂದ ಜೋಗ, ಸಿಗಂದೂರು ಮತ್ತು ಚಿತ್ರದುರ್ಗಕ್ಕೆ ವಿಶೇ ಪ್ಯಾಕೇಜ್ ಘೋಷಿಸಿದ್ದು, ಪ್ರವಾಸಿಗರಿಗೆ ಇದರಿಂದ ಭಾರಿ ಅನುಕೂಲವಾಗಲಿದೆ.

https://www.suddikanaja.com/2021/07/21/ksrtc-special-trip-to-jogfalls/

ಟೂರ್ ಪ್ಯಾಕೇಜ್ ಎಲ್ಲಿಂದ ಎಲ್ಲಿಗೆ?

  1. ಮೊದಲನೇ ಪ್ಯಾಕೇಜಿನಲ್ಲಿ ಬೆಂಗಳೂರು- ವರದಹಳ್ಳಿ- ವರದಮೂಲ- ಇಕ್ಕೇರಿ- ಕೆಳದಿ- ಜೋಗ ಜಲಪಾತಕ್ಕೆ ರಾಜಹಂಸ, ನಾನ್ ಏಸಿ ಸ್ಲೀಪರ್ ಬಸ್ ಸಂಚರಿಸಲಿದೆ.
  2. ಬೆಂಗಳೂರು- ಚಿತ್ರದುರ್ಗ- ವಾಣಿವಿಲಾಸ ಸಾಗರಕ್ಕೆ ರಾಜಹಂಸ ಬಸ್ ಲಭ್ಯವಿದೆ.
  3. ಬೆಂಗಳೂರು-ಸಿಂಗದೂರು ಚೌಡೇಶ್ವರಿ-ಜೋಗ ಜಲಪಾತ ಪ್ಯಾಕೇಜ್ ಟೂರ್‌ (ಐರಾವತ ಕ್ಲಬ್ ಕ್ಲಾಸ್)
  4. ಬೆಂಗಳೂರು- ಸಿಂಗದೂರು ಚೌಡೇಶ್ವರಿ- ಜೋಗ ಜಲಪಾತಕ್ಕೆ ಐರಾವತ ಕ್ಲಬ್ ಕ್ಲಾಸ್ ಬಸ್ ಬಿಡಲಾಗಿದೆ.

ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ, ಗೈಡ್ ಶುಲ್ಕ ಸೇರಿ ಶುಲ್ಕದ ನಿರ್ಧರಿಸಲಾಗಿದೆ.

ಬೆಂಗಳೂರಿಂದ ಜೋಗಕ್ಕೆ ಲಭ್ಯವಿರುವ ಪ್ಯಾಕೇಜಿಗಾಗಿ ವಯಸ್ಕರಿಗೆ 2, 200 ರೂಪಾಯಿ, ಮಕ್ಕಳಿಗೆ 2,000 ರೂಪಾಯಿ ಶುಲ್ಕವಿದೆ. ಒಂದುವೇಳೆ ರಾಜಹಂಸದಲ್ಲಿ ಪ್ರಯಾಣಿಸಬೇಕಾದರೆ ವಯಸ್ಕರಿಗೆ 1,900 ಹಾಗೂ
ಮಕ್ಕಳಿಗೆ 1,700 ರೂಪಾಯಿ ಪಾವತಿಸಬೇಕು.

ಬೆಂಗಳೂರು-ಸಿಗಂದೂರು- ಜೋಗಕ್ಕೆ ಐರಾವತ ಬಸ್ಸಿಗೆ ವಯಸ್ಕರರಿಗೆ 2500, ಮಕ್ಕಳಿಗೆ 2,300 ರೂಪಾಯಿ ಪಾವತಿಸಬೇಕು.

ಬೆಂಗಳೂರಿಂದ ವಾಣಿ ವಿಲಾಸಕ್ಕೆ ಶುಕ್ರವಾರ, ಶನಿವಾರ ಟೂರ್ ಗೆ ತೆರಳಬೇಕಾದರೆ ಅದಕ್ಕೆ ವಯಸ್ಕರರಿಗೆ 1000, ಮಕ್ಕಳಿಗೆ 800 ರೂಪಾಯಿ ಪಾವತಿ ಮಾಡಬೇಕು.

https://www.suddikanaja.com/2021/07/18/jogfalls-covered-with-mist/

error: Content is protected !!