ಬಸ್ ಸಂಚಾರ ಆರಂಭಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ನಡೀತು ಬೃಹತ್ ಪ್ರತಿಭಟನೆ

 

 

ಸುದ್ದಿ ಕಣಜ.ಕಾಂ | TALUK | PROTEST
ಸಾಗರ: ಹಿರೆಬಿಲಗುಂದಿ ವ್ಯಾಪ್ತಿಗೆ ಬಸ್ ಸಂಚಾರ ಸಂಭವಿಸುವಂತೆ ಆಗ್ರಹಿಸಿ ವಿದ್ಯಾರ್ಥಿ ಒಕ್ಕೂಟದಿಂದ ಸೋಮವಾರ ಬೃಹತ್ ಪ್ರತಿಭಟನೆ ಮಾಡಲಾಯಿತು.
ಸರ್ಕಾರದ ನಿರ್ದೇಶನದಂತೆ ಶಾಲಾ, ಕಾಲೇಜುಗಳು‌ ಆರಂಭಿಸಲಾಗಿದೆ. ಆದರೆ, ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆ‌ ಆಗುತ್ತಿದ್ದು, ಈ‌ ಬಗ್ಗೆ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

sagara strike for bus 1ಕ್ಷೇತ್ರದ ಶಾಸಕ ಹಾಲಪ್ಪ,‌ ಸಾರಿಗೆ ಸಂಸ್ಥೆ ಅಧಿಕಾರಿಗೆ ಮನವಿ
ವರದಾಹಳ್ಳಿ ಕ್ರಾಸ್ ನಿಂದ ಕೆ.ಎಸ್.ಆರ್.ಟಿ.ಸಿ ಡಿಪೋವರೆಗೆ ಬೃಹತ್ ಜಾಥಾ ನಡೆಸಿ ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಲಾಯಿತು. ನಂತರ, ಸಾಗರ ಶಾಸಕ‌ ಎಚ್.ಹಾಲಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

READ | ಸಿಎಂ ಸ್ಥಾನಕ್ಕೆ ರಾಜೀನಾಮೆ‌ ನೀಡಿದ್ದರ ಬಗ್ಗೆ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?

ಈ ವೇಳೆ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಎಂ.ಚಿನ್ಮಯ್, ತಾಲೂಕು ಅಧ್ಯಕ್ಷ ಜಿ.ಅಜಿತ್ ಕೇಶವ್, ಸುಷ್ಮಿತಾ, ರಮ್ಯ, ಅಭಿನಯ, ಸುನೀಲ್, ಅನಿರುದ್ಧ, ವಿನಾಯಕ ಸೇರಿದಂತೆ ಹಲವು ವಿದ್ಯಾರ್ಥಿಗಳು ಹಾಜರಿದ್ದರು.

error: Content is protected !!