ಕ್ಷಣಾರ್ಧದಲ್ಲೇ ಧಗ ಧಗನೇ ಸುಟ್ಟು ಕರಕಲಾದ ಕಾರು!

 

 

ಸುದ್ದಿ ಕಣಜ.ಕಾಂ | TALUK | CRIME
ಸೊರಬ: ಚಿಕ್ಕಚೌಟಿಯಿಂದ ಆನವಟ್ಟಿಗೆ ಹೊರಟಿದ್ದ ಕಾರೊಂದು ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಜೀವಹಾನಿಯಾಗಿಲ್ಲ. ಉಳ್ಳಿ ಗ್ರಾಮದ ರಾಜು ಎಂಬುವವರಿಗೆ ಸೇರಿದ ಈ ಕಾರಿನ ಬಾನೆಟ್ ನಲ್ಲಿ ದಟ್ಟದಾದ ಹೊಗೆ ಕಾಣಿಸಿಕೊಂಡಿದೆ.‌ ನಂತರ, ಕ್ಷಣಾರ್ಧದಲ್ಲೇ ಕಾರಿನಲ್ಲಿ ಬೆಂಕಿ‌ ಕಾಣಿಸಿಕೊಂಡಿದೆ.
ನಂದಿಸುವ ಪ್ರಯತ್ನ ವಿಫಲ
ಕಾರಿಗೆ ಬೆಂಕಿ ತಾಕುತಿದ್ದಂತೆ ಪಕ್ಕದಲ್ಲಿಯೇ ಇದ್ದ ತೋಟದ ಮನೆಯವರು ಸಹಾಯಕ್ಕೆ ಧಾವಿಸಿದ್ದಾರೆ. ನೀರು ಹಾಕಿ ಬೆಂಕಿ‌ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ. ಕಾರು ಪೂರ್ಣ ಪ್ರಮಾಣದಲ್ಲಿ ಸುಟ್ಟಿದೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

error: Content is protected !!