BREAKING NEWS | ಶಾರ್ಟ್ ಸರ್ಕ್ಯೂಟ್, ಹೊತ್ತಿ ಉರಿದ ಮನೆಯ ಸಾಮಗ್ರಿ, ಲಕ್ಷಾಂತರ ನಷ್ಟ

 

 

ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯಲ್ಲಿ ಬೆಂಕಿ‌ ಕಾಣಿಸಿಕೊಂಡಿದ್ದು ಅಂದಾಜು ₹4 ಲಕ್ಷ ನಷ್ಟವಾಗಿರುವುದಾಗಿ ಮನೆಯ ಮಾಲೀಕರು ತಿಳಿಸಿದ್ದಾರೆ.
ಬಾಪೂಜಿ ನಗರ ಮೂರನೇ ಕ್ರಾಸ್‍ ನಲ್ಲಿರುವ ಸುರೇಶ್ ಎಂಬುವವರ ಮನೆಯಲ್ಲಿ ಬುಧವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ತಕ್ಷಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಅಧಿಕಾರಿ ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್, ಸಿಬ್ಬಂದಿ ಬೆಂಕಿ ನಂದಿಸಿದ್ದು, ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ.

error: Content is protected !!