ಸಾಗರಕ್ಕೆ ಭೇಟಿ ನೀಡಿದದ್ದ ಲಾಲ್ ಬಹಾದ್ದೂರ್ ಶಾಸ್ತ್ರೀ

 

 

ಸುದ್ದಿ ಕಣಜ.ಕಾಂ | TALUK | PROGRAM NEWS
ಸಾಗರ: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಸಾಗರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಉಪನ್ಯಾಸಕ ದಯಾನಂದ್ ನಾಯಕ್ ಹೇಳಿದರು.
ಗಾಂಧೀಜಿ-ಶಾಸ್ತ್ರೀಜಿಗೆ ನಮನ ಸಲ್ಲಿಸಿದ ಶ್ರೀನಗರ ಯುವಜನ ಸಂಘದಿಂದ ಸಾಗರದ 8ನೇ ವಾರ್ಡ್ ಶ್ರೀನಗರದಲ್ಲಿ ಶನಿವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಾಸ್ತ್ರೀ ಅವರು ಲಿಂಗನಮಕ್ಕಿ ಜಲಾಶಯದಿಂದ ತಲಕಳಲೆ ಬ್ಯಾಲೆನ್ಸಿಂಗ್ ರಿಸರ್ವಾಯರ್ ಗೆ ನೀರನ್ನು ಸಾಗಿಸುವ ಸುರಂಗದ ಕಾಮಗಾರಿ ನಡೆದಿದ್ದ ಸ್ಥಳಕ್ಕೆ ಅವರು ಭೇಟಿ ನೀಡಿದ್ದರು. ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು.

ಸಾಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಲ್.ಬಿ.ಕಾಲೇಜಿಗೆ 1964 ರಲ್ಲಿ ಭೇಟಿ ನೀಡಿ ಅಡಿಗಲ್ಲು ಹಾಕುವುದರ ಮೂಲಕ ಚಾಲನೆ ನೀಡಿದರು. ಆದ್ದರಿಂದ ಇಂದಿಗೂ ಕಾಲೇಜಿಗೆ ಲಾಲ್ ಬಹದ್ದೂರ್ ಶಾಸ್ತ್ರೀ ಕಾಲೇಜು ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.
ಸುಬ್ರಹ್ಮಣ್ಯ ಮಾತನಾಡಿ, ಗಾಂಧೀಜಿಯ ಜೀವನವೇ 1ಸಂದೇಶವಾಗಿದ್ದು, ಅವರ ಹೆಸರು ಭಾರತೀಯರ ಮನಸ್ಸಿನಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ. ಭಾರತದಲ್ಲಿ ಮಾತ್ರವಲ್ಲದೇ ದಕ್ಷಿಣ ಆಫ್ರಿಕಾದಲ್ಲೂ ವರ್ಣಭೇದ ನೀತಿಯ ವಿರುದ್ಧ ಹೋರಾಡಿ ಮನೆ ಮಾತಾದರು ಎಂದು ಹೇಳಿದರು.
ಪ್ರಮುಖರಾದ ದಿನೇಶ್, ಚೇತನ್, ಗಣೇಶ್ ಕಿಣಿ, ಜವೀರ್, ಕಲ್ಲೇಶಪ್ಪ, ಅನಿಲ್, ಕಿರಣ್, ಚಂದನ್, ಸೂರಜ್ ನಾಯರ್ ಇತರರಿದ್ದರು.

https://www.suddikanaja.com/2020/11/20/bihar-man-found-in-sagar/

error: Content is protected !!