ಸುದ್ದಿ ಕಣಜ.ಕಾಂ | DISTRICT | SHIVAMOGGA DASARA
ಶಿವಮೊಗ್ಗ: ಮಹಾನಗರ ಪಾಲಿಕೆಯು ನಾಡಹಬ್ಬ ದಸರಾ ಪ್ರಯುಕ್ತ ಅಕ್ಟೋಬರ್ 10ರಂದು ನಗರದ ಸ್ವತಂತ್ರ ಉದ್ಯಾನದಲ್ಲಿ ಬೆಳಗ್ಗೆ 9.30 ಗಂಟೆಗೆ ಜಿಲ್ಲಾಮಟ್ಟದ ಡೊಳ್ಳು ಮತ್ತು ವೀರಗಾಸೆ ಸ್ಪರ್ಧೆ ಏರ್ಪಡಿಸಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದವರಿಗೆ ಆಕರ್ಷಕ ಬಹುಮಾನ ನಿಗದಿಪಡಿಸಲಾಗಿದೆ. ಪ್ರಥಮ ಸ್ಥಾನಕ್ಕೆ ₹30,000, ದ್ವಿತೀಯ ಸ್ಥಾನಕ್ಕೆ ₹20,000 ಹಾಗೂ ತೃತೀಯ ಸ್ಥಾನಕ್ಕೆ ₹10,000 ಬಹುಮಾನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಅಂತರ ರಾಷ್ಟ್ರೀಯ ಗಾಯಕ ಹಾಗೂ ರಾಜ್ಯಮಟ್ಟದ ತೀರ್ಪುಗಾರ ಮಹೇಂದ್ರ ಗೋರೆ 7760254622, 9611532429ಗೆ ಸಂಪರ್ಕಿಸಲು ತಿಳಿಸಲಾಗಿದೆ.