ರಸಗೊಬ್ಬರ ಚಿಲ್ಲರೆ ಮಳಿಗೆಯಲ್ಲೂ ಡಿಜಿಟಲ್ ಪೇಮೆಂಟ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಬಳಿಕ ಬಹುತೇಕ ಆರ್ಥಿಕ ವ್ಯವಹಾರ ಡಿಜಿಟಲ್ ಕಡೆ ವಾಲುತ್ತಿದೆ. ಮುಂದುವರಿದ ಭಾಗವಾಗಿ ಜಿಲ್ಲೆಯ ರಸಗೊಬ್ಬರ ಚಿಲ್ಲರೆ ಮಳಿಗೆಯಲ್ಲೂ ಡಿಜಿಟಲ್ ಪೇಮೆಂಟ್’ಗೆ ಒತ್ತು ನೀಡುವಂತೆ ಜಂಟಿ ಕೃಷಿ ನಿರ್ದೇಶಕ ಡಾ. ಕಿರಣ್ ಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ 436 ಮಳಿಗೆಗಳಿದ್ದು, ಅವುಗಳಲ್ಲಿ ಕೆಲವಷ್ಟೇ ಗೂಗಲ್ ಪೇ, ಫೋನ್ ಪೇಯಂತಹ ಡಿಜಿಟಲ್ ಪಾವತಿಗೆ ವಾಲಿವೆ. ಇನ್ನುಳಿದವರೂ ಇದೆರೆಡೆಗೆ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ.
ಕೇಂದ್ರ ಸರಕಾರದಿಂದ ರಸಗೊಬ್ಬರದಲ್ಲಿ ನೇರ ನೆರವು ವರ್ಗಾವಣೆ ಯೋಜನೆ ಅಡಿ ಎಲ್ಲ ರಸಗೊಬ್ಬರ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ರೈತರಿಗೆ ರಸಗೊಬ್ಬರವನ್ನು ಮಾರಾಟ ಮಾಡಲು ನಗದು ರಹಿತ, ಡಿಜಿಟೆಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸುವುದಕ್ಕಾಗಿ ಈ ಹೆಜ್ಜೆ ಇಡಲಾಗಿದೆ.
ಹೀಗಾಗಿ, ಜಿಲ್ಲೆಯಲ್ಲಿರುವ ಎಲ್ಲ ಚಿಲ್ಲರೆ ಮಾರಾಟಗಾರರು ತಮ್ಮ ಮಳಿಗೆಗಳಲ್ಲಿ ತಪ್ಪದೇ ಡಿಜಿಟೆಲ್ ಪಾವತಿ ವ್ಯವಸ್ಥೆ ಅವಕಾಶ ಮಾಡಿಕೊಳ್ಳಬೇಕು. ಅದಕ್ಕಾಗಿ ಅಗತ್ಯವಿರುವ ಕ್ಯೂ ಆರ್. ಕೋಡ್ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. ಒಂದುವೇಳೆ, ಈ ಬಗ್ಗೆ ಯಾವುದೇ ರೀತಿಯ ಅನುಮಾನಗಳಿದ್ದರೆ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಲು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!