ಸಾರಿಗೆ ಸಂಸ್ಥೆ ಬಸ್ ಮೇಲೂ ಗಲಭೆ ಎಫೆಕ್ಟ್, ನಾಳೆ ಬಸ್ ಸಂಚಾರ ಹೇಗಿರುತ್ತೆ?

 

 

IMG 20201204 151905ಸುದ್ದಿ ಕಣಜ.ಕಾಂ
ಶಿವಮೊಗ್ಗ: ಈಗಾಗಲೇ ಕೋವಿಡ್’ನಿಂದಾಗಿ ಸಾರಿಗೆ ಸಂಸ್ಥೆ ಬಸ್ ಮೂಲಕ ಪ್ರಯಾಣಿಸುವ ಸಾರ್ವಜನಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ಅದರಲ್ಲೂ ಗುರುವಾರ ಶಿವಮೊಗ್ಗದಲ್ಲಿ ನಡೆದ ಗಲಭೆ ಕೆ.ಎಸ್.ಆರ್.ಟಿ.ಸಿ ಆದಾಯದ ಮೇಲೆಯೂ ಪರಿಣಾಮ ಬೀರಿದೆ. ಶಿವಮೊಗ್ಗ ಬಸ್ ನಿಲ್ದಾಣದಿಂದ ಪ್ರತಿನಿತ್ಯ 15-16 ಸಾವಿರ ಜನ ಓಡಾಡುತ್ತಾರೆ. ಆದರೆ, ನಿಷೇಧಾಜ್ಞೆ ಹಾಗೂ ಗಲಭೆಯ ಭೀತಿಯಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ 3-4 ಸಾವಿರ ಇಳಿಕೆಯಾಗಿದೆ.
ನಗರದಲ್ಲಿ 144 ಜಾರಿಯಲ್ಲಿರುವುದರಿಂದ ಬಿ.ಎಚ್.ರಸ್ತೆ ಬದಲು ಬೈಪಾಸ್ ಮೂಲಕ ಬಸ್ ಸಂಚರಿಸಿದವು. ಒಂದುವೇಳೆ, ಶನಿವಾರ ಬೆಳಗ್ಗೆ 10 ಗಂಟೆಯ ಬಳಿಕವೂ ನಿಷೇಧಾಜ್ಞೆ ಮುಂದುವರಿದರೆ ಬೈಪಾಸ್ ಮೂಲಕವೇ ಸಂಚರಿಸಲಿವೆ. ಇಲ್ಲದಿದ್ದರೆ ಎಂದಿನಂತೆ ಬಿ.ಎಚ್. ರಸ್ತೆ ಮಾರ್ಗವಾಗಿ ಓಡಾಡಲಿವೆ.

ಹಳೇ ಶಿವಮೊಗ್ಗದಲ್ಲಿ ಮುಂದುವರಿಯಲಿದೆ ಕರ್ಫ್ಯೂ
ಐಜಿಪಿ ಪ್ರೆಸ್ ಮೀಟ್ ನಲ್ಲಿ ಹೇಳಿದ್ದೇನು?

 

error: Content is protected !!