ಸುದ್ದಿ ಕಣಜ.ಕಾಂ
ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಲ್ಲದ 31 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದು, ಅವುಗಳ ಹರಾಜು ಮಾರ್ಚ್ 7ರಂದು ನಡೆಯಲಿದೆ.
ಈ ವಾಹನಗಳಲ್ಲಿ ಆರ್.ಟಿ.ಓ. ಅಧಿಕಾರಿಗಳು ದರ ನಿಗದಿ ಪಡಿಸಿದ್ದ 19 ವಾಹನಗಳನ್ನು ಹರಾಜು ಮಾಡಲಾಗುವುದು. ಆಸಕ್ತರು ಬಹಿರಂಗ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.