ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆಯ ಬಿಜೆಪಿ ಮೂರನೇ ಅವಧಿಯ ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ಮಾರ್ಚ್ 10ರಂದು ನಡೆಯಲಿದೆ.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಮೇಯರ್ ಸ್ಥಾನ ಬಹುತೇಕ ಪಕ್ಕಾ ಆಗಿದ್ದು, ಉಪ ಮೇಯರ್ ಹುದ್ದೆಗಾಗಿ ಫೈಟ್ ನಡೆದಿದೆ. ಆದರೆ, ಈ ಫೈಟ್ ನಲ್ಲಿ ಯಾರ ಕೈ ಮೇಲಾಗುತ್ತೆ ಎಂಬುವುದು ಮಾ.10ರಂದು ಬೆಳಗ್ಗೆ ನಗರದ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಮೀಟಿಂಗ್ ನಿರ್ಧರಿಸಲಿದೆ.
ಯಾರದ್ದೇನು ಪ್ಲಸ್ ಪಾಯಿಂಟ್
ಮೇಯರ್ ಸ್ಥಾನವನ್ನು ರಾಜ್ಯ ಸರ್ಕಾರ ಬಿಸಿಎ ಮಹಿಳೆ ಕೆಟಗರಿಗೆ ಮೀಸಲಿಟ್ಟಿದ್ದು, ಈ ಕೋಟಾ ಅಡಿ ಸುನೀತಾ ಅಣ್ಣಪ್ಪ ಹೆಸರು ಬಹುತೇಕ ಫೈನಲ್ ಆಗಿದೆ. ಉಪ ಮೇಯರ್ ಸ್ಥಾನ ಸಾಮಾನ್ಯಕ್ಕೆ ಮೀಸಲಿಟ್ಟಿದ್ದು, ಶಂಕರ್ ಗನ್ನಿ ಮತ್ತು ಇ.ವಿಶ್ವಾಸ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಅನುಭವ, ಸೀನಿಯಾರಿಟಿ ಅಡಿ ಆಯ್ಕೆ ಮಾಡಿದ್ದಲ್ಲಿ ಗನ್ನಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಅದೇ ಪಕ್ಷದ ಜವಾಬ್ದಾರಿಗಳನ್ನು ಕಟ್ಟುನಿಂದ ಮಾಡುವುದು, ಶಿಕ್ಷಣ, ಜಾತಿ ಬಲದ ಲೆಕ್ಕಾಚಾರ ಹಾಕಿದ್ದಲ್ಲಿ ವಿಶ್ವಾಸ್ ಅವರಿಗೆ ವರವಾಗಿ ಪರಿಣಮಿಸಲಿದೆ.
ಮಧ್ಯಾಹ್ನ 1 ಗಂಟೆಗೆ ಪಾಲಿಕೆಯಲ್ಲಿ ಆಯ್ಕೆ ಪ್ರಕಿಯೆ ನಡೆಯಲಿದೆ. ಪ್ರಸ್ತುತ ಬಿಜೆಪಿ ಪಕ್ಷಕ್ಕೆ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಇರುವುದರಿಂದ ಬೇರ್ಯಾವ ಭಯವಿಲ್ಲ. ಅಲ್ಲದೇ ಇತ್ತೀಚೆಗೆ ಬಿಜೆಪಿ ಕಾರ್ಪೋರೇಟರ್ ಗಳಿಗೆ ಮೈಸೂರು ಟ್ರಿಪ್ ಆಗಿರುವುದರಿಂದ ಪಕ್ಷದ ನಿಲುವಿಗೆ ಮುಖಂಡರು ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.