ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ವೈರಸ್ ಸೋಂಕು ಜಿಲ್ಲೆಯಲ್ಲಿ ದಿನೇ ದಿನೆ ಏರಿಕೆ ಕಾಣುತ್ತಿದ್ದು, ಈ ನಿಟ್ಟಿನಲ್ಲಿ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಬೇಕು. ಒಂದುವೇಳೆ ಮಾಸ್ಕ್ ಧರಿಸದಿದ್ದರೆ ಅಂತಹವರಿಗೆ ದಂಡ ವಿಧಿಸಬೇಕೆಂದು ಪಾಲಿಕೆಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಗಿದೆ.
READ | ಕೆ.ಎಸ್.ಆರ್.ಟಿ.ಸಿ. ಮುಷ್ಕರ, ಮೂರನೇ ದಿನ ಹೇಗಿದೆ ಬಸ್ ಸಂಚಾರ?, ಎಲ್ಲೆಲ್ಲಿಗೆ ಬಸ್ ಲಭ್ಯ?
1.20 ಲಕ್ಷ ಜನರಿಗೆ ಲಸಿಕೆ | ಈ ವೇಳೆ ಮಾತನಾಡಿದ ಡಿ.ಎಚ್.ಒ. ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲೆಯಲ್ಲಿ 1.20 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಕೋವಿ ಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ನೀಡಿದ್ದು, ಶೇ.95 ಜನರಿಗೆ ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ. ಶೇ.5ರಷ್ಟು ವಿಳಂಬವಾಗಬಹುದು. ಲಸಿಕೆ ಕೊಟ್ಟ 24 ಗಂಟೆಯೊಳಗೆ ಸಣ್ಣ ಪುಟ್ಟ ಅಡ್ಡ ಪರಿಣಾಮ ಇರಬಹುದು. ಆದರೆ, ಆಸ್ಪತ್ರೆ ಸೇರಬೇಕಾದ ಯಾವುದೇ ಘಟನೆಗಳು ಜಿಲ್ಲೆಯಲ್ಲಿ ಸಂಭವಿಸಿಲ್ಲ. ಅದರ ಅಗತ್ಯವೂ ಇಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಸದಸ್ಯರಾದ ರಮೇಶ್ ಹೆಗ್ಗೆಡೆ, ಆರ್.ಸಿ.ನಾಯಕ್, ಕಲ್ಪನಾ ರಾಮು, ಮಂಜುನಾಥ್, ಆರೋಗ್ಯ ಇಲಾಖೆಯ ಡಾ. ನಾಗರಾಜ್ ನಾಯಕ್, ಡಾ. ಚಂದ್ರಶೇಖರ್, ಐಎಂಎ ಅಧ್ಯಕ್ಷ ಪರಮೇಶ್ವರ್ ಶಿಗ್ಗಾವಿ ಉಪಸ್ಥಿತರಿದ್ದರು.
https://www.suddikanaja.com/2021/03/31/fine-on-not-wearing-mask-by-shivamogga-police/