ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಷಾರ್… ಮಾಸ್ಕ್ ಇಲ್ಲದೇ ಹೊರಬಂದರೆ, ದಂಡ ಬೀಳುವುದು ಗ್ಯಾರಂಟಿ! ಕಾರಣ, ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿದೆ.
ಸೋಮವಾರವೊಂದೇ ದಿನ ಜಿಲ್ಲೆಯಲ್ಲಿ ಒಟ್ಟು 1,166 ಪ್ರಕರಣಗಳನ್ನು ದಾಖಲಿಸಿ, 1,60,450 ರೂಪಾಯಿ ದಂಡ ವಿಧಿಸಲಾಗಿದೆ.
ಯಾವ ತಾಲೂಕಿನಲ್ಲಿ ಎಷ್ಟು ಪ್ರಕರಣ | ಶಿವಮೊಗ್ಗದಲ್ಲಿ 411, ಶಿಕಾರಿಪುರ 265, ಭದ್ರಾವತಿ 58, ಸಾಗರ 123 ಹಾಗೂ ತೀರ್ಥಹಳ್ಳಿಯಲ್ಲಿ 309 ಪ್ರಕರಣಗಳನ್ನು ದಾಖಲಿಸಲಾಗಿದೆ.