ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಲಾಕ್ ಡೌನ್ ಹಿನ್ನೆಲೆ ತರಕಾರಿ, ಹೂವು, ಹಣ್ಣು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೆ ಶಿಮುಲ್ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಈಗಿರುವ ಬೆಲೆಯಲ್ಲಿಯೇ ಹೆಚ್ಚುವರಿ ಹಾಲನ್ನು ನೀಡಲು ಮುಂದಾಗಿದೆ.
https://www.suddikanaja.com/2021/02/28/shimul-increased-milk-purchase-price/
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟ(ಶಿಮುಲ್)ವು ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ಜೂನ್ 1ರಿಂದ 30ರ ವರೆಗೆ ‘ಹೆಚ್ಚು ಹಾಲು ಕುಡಿಯಿರಿ’ ಕಾರ್ಯಕ್ರಮ ಹಮ್ಮಿಕೊಂಡಿದೆ.
ಗ್ರಾಹಕರ ಆರೋಗ್ಯದ ದೃಷ್ಟಿಕೋನದಿಂದ ಕಾರ್ಯಕ್ರಮ ಕೈಗೊಳ್ಳಲಾಗಿದೆ. 30 ದಿನಗಳ ಕಾಲ ಹೆಚ್ಚುವರಿ ಹಾಲು ಗ್ರಾಹಕರಿಗೆ ಸಿಗಲಿದೆ.
ಎಷ್ಟು ಅಧಿಕ ಹಾಲು | ಒಕ್ಕೂಟದದಿಂದ ಮಾರಾಟವಾಗುತ್ತಿರುವ ಎಲ್ಲ ಮಾದರಿಯ ಹಾಲಿನ 500 ಎಂಎಲ್ ಮತ್ತು 1000 ಎಂಎಲ್ ಪ್ಯಾಕೇಟ್ ನಲ್ಲಿ ಅನುಕ್ರಮವಾಗಿ 20 ಎಂಎಲ್ ಹಾಗೂ 40 ಎಂಎಲ್ ಹಾಲನ್ನು ಹೆಚ್ಚುವರಿಯಾಗಿ ಉಚಿತವಾಗಿ ನೀಡಲಾಗುವುದು ಎಂದು ಶಿಮುಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಈ ಹೆಚ್ಚುವರಿ ಹಾಲಿನ ಸೇವನೆಯಿಂದ ಗ್ರಾಹಕರ ಆರೋಗ್ಯದಲ್ಲಿ ಪೌಷ್ಟಿಕಾಂಶ ಹೆಚ್ಚಳವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಯೋಜನೆಯನ್ನು ಗ್ರಾಹಕರ ಹಿತಕ್ಕಾಗಿ ಹಮ್ಮಿಕೊಳ್ಳಲಾಗಿದೆ.
https://www.suddikanaja.com/2021/01/12/shimul-price-hike-on-milk-purchase-from-farmers/