ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾಡಳಿತ ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಜೂನ್ 7ರ ವರೆಗೆ ಲಾಕ್ ಡೌನ್ ಘೋಷಿಸಿದೆ. ಈ ಅವಧಿಯಲ್ಲಿ ಬ್ಯಾಂಕ್ ಸಮಯ ಕೂಡ ಬದಲಾಗಲಿದೆ ಎಂದು ಬ್ಯಾಂಕ್ನ ಅಧಿಕೃತ ಮೂಲಗಳು ‘ಸುದ್ದಿ ಕಣಜ.ಕಾಂ’ಗೆ ಸ್ಪಷ್ಟಪಡಿಸಿವೆ.
https://www.suddikanaja.com/2021/05/29/lock-down-for-one-week-bank-will-open/
ಸೋಮವಾರ (ಮೇ 31)ದಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕ ವ್ಯವಹಾರಕ್ಕೆ ಅವಕಾಶವಿದ್ದು, ಬ್ಯಾಂಕ್ ವ್ಯವಹಾರ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಆದರೆ, ಮಧ್ಯಾಹ್ನ 2ರಿಂದ ಸಂಜೆ 4ರ ವರೆಗೆ ಸಾರ್ವಜನಿಕರ ಭೇಟಿ, ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ.
ಬದಲಾದ ವೇಳೆ | ಮಂಗಳವಾರದಿಂದ ಜೂನ್ 7ರ ವರೆಗೆ ಬ್ಯಾಂಕ್ ವೇಳೆಯಲ್ಲಿ ಬದಲಾವಣೆ ಆಗಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಸಾರ್ವಜನಿಕರ ಆಗಮನಕ್ಕೆ ಅವಕಾಶವಿದೆ. ಇನ್ನುಳಿದಂತೆ, 1ರಿಂದ 2 ಗಂಟೆಯವರೆಗೆ ಬ್ಯಾಂಕಿನ ಆಂತರಿಕ ಕೆಲಸಗಳು ನಡೆಯಲಿದೆ. ಈ ವೇಳೆ ಜನರ ಪ್ರವೇಶ ಇರುವುದಿಲ್ಲ.
ಜನರಲ್ಲಿ ಗೊಂದಲ | ಲಾಕ್ ಡೌನ್ ಘೋಷಣೆಯಾದಾಗ ಬ್ಯಾಂಕ್ ಕೂಡ ರಜೆ ಇರಲಿವೆ ಎಂದು ಘೋಷಣೆ ಮಾಡಲಾಗಿತ್ತು. ಅದಾದ ಬಳಿಕ ಜಿಲ್ಲಾಡಳಿತ ಬ್ಯಾಂಕ್ ಕಾರ್ಯನಿರ್ವಹಣೆಯ ಬಗ್ಗೆ ತಿಳಿಸಿದೆ. ಆದರೆ, ಜನರಲ್ಲಿ ಈಗಲೂ ಗೊಂದಲವಿದೆ. ಸೋಮವಾರ ಬೆಳಗ್ಗೆಯಿಂದ ನಿರೀಕ್ಷಿತ ಮಟ್ಟದಲ್ಲಿ ಜನರು ಬ್ಯಾಂಕ್ ಗಳಿಗೆ ಆಗಮಿಸಿಲ್ಲ. ಬ್ಯಾಂಕ್ ರಜೆ ಇದೆ ಎಂಬ ಅಭಿಪ್ರಾಯದಲ್ಲಿಯೇ ಸಾರ್ವಜನಿಕರು ಇದ್ದಾರೆ.
https://www.suddikanaja.com/2021/03/23/online-fraud-by-a-company-to-bank-employee/