ಸುದ್ದಿ ಕಣಜ.ಕಾಂ
ಶಿವಮೊಗ್ಗ: ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಅವರು ಶುಕ್ರವಾರ ತಡರಾತ್ರಿ ನಿಧನ ಹೊಂದಿದ್ದಾರೆ. ಇವರ ಸಾವಿಗೆ ದೇಶವೇ ಕಂಬನಿ ಮಿಡಿದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಆತ್ಮಕ್ಕೆ ಶಾಂತಿ ಕೋರಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ.
https://www.suddikanaja.com/2021/03/01/khelo-india-winter-games-2-golds-won-by-shivamogga-girls/
ಕ್ರೀಡಾ ಕ್ಷೇತ್ರದಲ್ಲಿ ರೋಮಾಂಚನವನ್ನೇ ಮೂಡಿಸಿರುವ ಮಿಲ್ಖಾ ಸಿಂಗ್ ಅವರು ತಮ್ಮ 91ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗೆ, ಇವರ ಪತ್ನಿ ನಿರ್ಮಲಾ ಕೌರ್ ಅವರು ಕೊರೊನಾದಿಂದ ನಿಧನರಾಗಿದ್ದರು. ಅವರ ಬೆನ್ನಲ್ಲೇ ಮಿಲ್ಖಾ ಸಿಂಗ್ ಅವರು ಅಸು ನೀಗಿದ್ದಾರೆ.
ಕೊರೊನಾ ಸೋಂಕಿನಿಂದ ಜರ್ಜರಿತರಾಗಿದ್ದ ಮಿಲ್ಖಾ ಅವರು ಇದೇ ಜೂನ್ 3ನೇ ತಾರೀಕು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಬಳಿಕವೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿರಲಿಲ್ಲ. ಹೀಗಾಗಿ, ಅವರನ್ನು ಬುಧವಾರ ಐಸಿಯುಗೆ ಸೇರಿಸಲಾಗಿತ್ತು. ಅಲ್ಲಿಯೂ ಜ್ವರ ನಿಯಂತ್ರಣಕ್ಕೆ ಬಂದಿಲ್ಲ. ಆದ್ದರಿಂದ, ಪಿಜಿಐಎಮ್ಇಆರ್ ಆಸ್ಪತ್ರೆಯಲ್ಲಿ ಅವರನ್ನು ಇಂಟೆನ್ಸಿವ್ ಕೇರ್ ಯೂನಿಟ್ಗೆ ದಾಖಲು ಮಾಡಲಾಗಿತ್ತು. ಆಮ್ಲಜನಕ ಸ್ಯಾಚ್ಯುರೇಷನ್ ಇತ್ತು. ಹೀಗಾಗಿ, ನಿರಂತರ ಚಿಕಿತ್ಸೆ ನೀಡಲಾಗಿತ್ತು. ಆದರೆ, ದೇಶಕ್ಕಾಗಿ ಹಲವು ಕಠಿಣ ಸವಾಲುಗಳನ್ನು ಎದುರಿಸಿ ಗೆದ್ದಿದ್ದ ಭಾರತದ ದಿಗ್ಗಜ ಓಟಗಾರ ಕೊರೊನಾ ಸೋಂಕನ್ನು ಗೆಲ್ಲಲಾಗಲಿಲ್ಲ. ಲಕ್ಷಾಂತರ ಅಭಿಮಾನಿಗಳ ಪ್ರಾರ್ಥನೆ ಕೈಗೂಡಲಿಲ್ಲ. ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಇವರು ಮಕ್ಕಳು, ಅಭಿಮಾನಿಗಳನ್ನು ಅಗಲಿದ್ದಾರೆ.
ಸಾಧನೆಗಳ ಮಹಾಪೂರ | ಒಬ್ಬ ಅಥ್ಲೀಟ್ ಆಗಿ ಮಿಲ್ಖಾ ಸಿಂಗ್ ಅವರಿಗೆ 1958ರಿಂದ 1960ರ ಅವಧಿ ಸುವರ್ಣ ಯುಗ ಎಂದರೂ ತಪ್ಪಾಗದು. 1958ರಲ್ಲಿ ಟೋಕಿಯೋದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಮಿಲ್ಖಾ, 200 ಮೀಟರ್ ಮತ್ತು 400 ಮೀಟರ್ ಓಟ ಸ್ಪರ್ಧೆಗಳಲ್ಲಿ ಕ್ರಮವಾಗಿ 21.6 ಸೆಕೆಂಡ್ಗಳು ಹಾಗೂ 47 ಸೆಕೆಂಡ್ಗಳಲ್ಲಿ ಓಡಿ, ಚಿನ್ನಕ್ಕೆ ಮುತ್ತಿಟ್ಟಿದ್ದರು. 1958ರಲ್ಲಿ ಕಾರ್ಡಿಫ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 46.16 ಸೆಕೆಂಡ್ಗಳಲ್ಲಿ 400 ಮೀಟರ್ ಓಟ ಮುಗಿಸಿ ಪುನಹ ಸ್ವರ್ಣ ಪದಕ ಗಳಿಸಿದ್ದರು. ಕಾಮನ್ವೆಲ್ತ್ ನಲ್ಲಿ ಸ್ವತಂತ್ರ ಭಾರತದ ಚೊಚ್ಚಲ ಚಿನ್ನದ ಪದಕ ಗಳಿಸಿದ ಅಥ್ಲೆಟ್ ಎಂಬ ಕೀರ್ತಿ ಪಡೆದರು. ಹೀಗೆ, ನಾನಾ ಸಾಧನೆಗಳನ್ನು ಮಾಡಿರುವ ಮಿಲ್ಖಾ ಭಾರತೀಯರಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಸಂದ ಪ್ರಶಸ್ತಿಗಳು | 1912ರ ಏಷ್ಯನ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ, 1959ರಲ್ಲಿ ಪದ್ಮಶ್ರೀ ಪ್ರಶಸ್ತಿ, 1958 ಏಷ್ಯನ್ ಕ್ರೀಡಾಕೂಟದಲ್ಲಿ 200 ಮೀಟರ್ ಹಾಗೂ 400 ಮೀಟರ್ ಓಟ ಸ್ಪರ್ಧೆಯಲ್ಲಿ ಸ್ವರ್ಣ ಪದಕ.
https://www.suddikanaja.com/2021/05/11/wrestler-srinivas-died-due-to-corona/