ಸುದ್ದಿ ಕಣಜ.ಕಾಂ | TALUK | CRIME
ತೀರ್ಥಹಳ್ಳಿ: ಭತ್ತದ ಸಸಿಗೆ ಸಿಂಪಡಣೆ ಮಾಡುವ ವಿಷದ ಬಾಟಲಿಯ ಮುಚ್ಚಳವನ್ನು ಬಾಯಿಂದ ತೆಗೆಯಲು ಹೋದ ಬಾಲಕನೊಬ್ಬ ಮೃತಪಟ್ಟಿದ್ದಾನೆ.
ತಾಲೂಕಿನ ಉಬ್ಬೂರು ಸಮೀಪದ ಶೆಡ್ಗಾರ್ ಗ್ರಾಮದಲ್ಲಿ ಘಟನೆ ನಡೆದಿದೆ. ಮಾಳೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತಿದ್ದ ರಾಜೇಶ್ (17) ಮೃತಪಟ್ಟಿದ್ದಾನೆ.
ಚಿಕಿತ್ಸೆ ಪಡೆದು ಮತ್ತೆ ಅಸ್ವಸ್ಥಗೊಂಡು ಸಾವು
ಆಗಸ್ಟ್ 7ರಂದು ಅಸ್ವಸ್ಥಗೊಂಡಿದ್ದ ಬಾಲಕ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಬಂದಿದ್ದ. ಎರಡು ದಿನಗಳ ನಂತರ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದೆ. ಹೆಚ್ಚುವರಿ ಚಿಕಿತ್ಸೆ ಪಡೆಯುವುದಕ್ಕಾಗಿ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.