ಸುದ್ದಿ ಕಣಜ.ಕಾಂ | TALUK | CRIME
ಸೊರಬ: ತಾಲೂಕಿನ ಮುಟಗುಪ್ಪೆ ಗ್ರಾಮ ಪಂಚಾಯಿತಿಯ ಬೀಗ ಮುರಿದು ಕಳವು ಮಾಡಿರುವ ಘಟನೆ ನಡೆದಿದೆ.
ಗ್ರಾಪಂ ಕಚೇರಿ ಹೊರ ಭಾಗದಲ್ಲಿದ್ದು, ಅದಕ್ಕೆ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳನ್ನು ಕಿತ್ತು ಬಳಿಕ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಪಂಚಾಯಿತಿಯಲ್ಲಿದ್ದ 1 ವೆಬ್ ಕ್ಯಾಮೆರಾ, 2 ಮಾನಿಟರ್, ಡಿವಿಆರ್ ಕಳ್ಳತನ ಮಾಡಲಾಗಿದೆ. ಬೀರು ಒಡೆದು ಹುಡುಕಾಟ ಮಾಡಲಾಗಿದ್ದು, ದಾಖಲೆಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಭಾನುವಾರ ಬೆಳಗ್ಗೆ ಬಂದು ನೋಡಲಾಗಿ ಕಳ್ಳತನ ಆಗಿರುವ ಗೊತ್ತಾಗಿದೆ. ದೂರು ನೀಡಲಾಗಿದ್ದು, ಪಿಎಸ್.ಐ ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ತನಿಖೆ ಮುಂದುವರಿದಿದೆ.