ಸುದ್ದಿ ಕಣಜ.ಕಾಂ | TALUK | CRIMS
ಶಿವಮೊಗ್ಗ: ಮದುವೆಗೂ ಮುನ್ನವೇ ಗರ್ಭ ಧರಿಸಿದ ಯುವತಿಯೊಬ್ಬಳು ಹೆರಿಗೆ ವೇಳೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ತಾಲೂಕಿನ ಕುಂಸಿ ಗ್ರಾಮದ ಅಶ್ವಿನಿ(20) ಮೃತಪಟ್ಟಿದ್ದು, ಹೊಟ್ಟೆ ನೋವಿನಿಂದಾಗಿ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆ ವೇಳೆ ಮಗು ಮೃತಪಟ್ಟಿದೆ. ನಂತರ, ತಾಯಿ ಸಹ ಅಸುನೀಗಿದ್ದಾಳೆ.
ನಡೆದಿದ್ದೇನು?
ಅಶ್ವಿನಿಯು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ತದನಂತರ, ಕುಂಸಿಗೆ ಬಂದಿದ್ದಾಳೆ. ಅಶ್ವಿನಿಯ ಪೋಷಕರು ಹೊಟ್ಟೆ ಮುಂದೆ ಬಂದಿರುವುದಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಹೊಟ್ಟೆ ಉಬ್ಬರಿಸಿದೆ ಎಂದು ಸಬೂಬು ನೀಡಿದ್ದಾಳೆ. ಏಳನೇ ತಿಂಗಳು ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೆ ಕಾರಣೀಭೂತರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಶ್ವಿನಿ ಪೋಷಕರು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಗು ಹಾಗೂ ತಾಯಿಯ ಡಿಎನ್.ಎ ಸ್ಯಾಂಪಲ್ ಸಂಗ್ರಹಿಸಿದ್ದಾರೆ.