ಮಲೆನಾಡಿಗೆ ಅಪಾಯದ ಮುನ್ಸೂಚನೆ ಎಚ್ಚೆತ್ತುಕೊಳ್ಳದಿದ್ದರೆ ಕಾದಿದೆ ಆಪತ್ತು

 

ಸುದ್ದಿ ಕಣಜ.ಕಾಂ | MALENADU | WEATHER REPORT
ಶಿವಮೊಗ್ಗ: ಶಿವಮೊಗ್ಗ ಸೇರಿ ಮಲೆನಾಡು ಜಿಲ್ಲೆಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ಧಗೆ ಜನರ ನೀರಿಳಿಸುತ್ತಿದೆ. ಮಳೆಗಾಲದಲ್ಲೂ ಫ್ಯಾನ್ ಇಲ್ಲದೇ ಕ್ಷಣಾರ್ಧವು ಮನೆಯಲ್ಲಿ ಕುಳಿತುಕೊಳ್ಳಲಾಗುತ್ತಿಲ್ಲ.
ಬೇಸಿಗೆಗೂ ಮುನ್ನವೇ ಬಿಸಿಲಿನ ಅನುಭವವಾಗುತ್ತಿದೆ. ಉರಿಬಿಸಿಲು, ಝಳದಿಂದಾಗಿ ಜನ ಸುಸ್ತಾಗಿದ್ದಾರೆ. ಆಗಸ್ಟ್ ನಲ್ಲಿ ಉತ್ತಮ ಮಳೆಯಾಗಿದ್ದು, ಸೆಪ್ಟೆಂಬರ್‍ನಲ್ಲಿ ವಾಡಿಕೆಗಿಂತ ಕಡಿಮೆ ವರ್ಷಧಾರೆಯಾಗಿದೆ.

ಧಗೆಗೇನು ಕಾರಣ?

ಜೂನ್ ನಿಂದ ಸೆಪ್ಟೆಂಬರ್ 19ರ ವರೆಗೆ ಮಲೆನಾಡು ಜಿಲ್ಲೆಗಳಲ್ಲಿ ವಾಡಿಕೆ ಮಳೆ 1,484 ಎಂಎಂ ಆಗಬೇಕು. ಆದರೆ, ಆಗಿದ್ದು 1,248 ಅಂದರೆ ಶೇ.16ರಷ್ಟು ಮಳೆ ಕೊರತೆಯಾಗಿದೆ. ಅದೇ ರೀತಿ, ದಕ್ಷಿಣ ಒಳನಾಡಿನಲ್ಲಿ ಶೇ.15 ಹಾಗೂ ಕರಾವಳಿಯಲ್ಲಿ ಶೇ.6ರಷ್ಟು ಮಳೆ ಕ್ಷೀಣಿಸಿದೆ. ಉತ್ತರ ಒಳನಾಡಿನಲ್ಲಿ ಅಧಿಕ ಮಳೆಯಾಗಿದೆ.
ರಾಜ್ಯದಲ್ಲಿಯೇ ಮಳೆ ಕೊರತೆ ಇದ್ದು, ಮಲೆನಾಡಿನಲ್ಲಿ ನಿರೀಕ್ಷಿತ ವರ್ಷಧಾರೆ ಆಗಿಲ್ಲ. ಜೊತೆಗೆ, ವಾತಾವರಣದಲ್ಲಿ ತೇವಾಂಶ ಭರಿತ ಮೋಡಗಳು ಇಲ್ಲದ್ದಕ್ಕೆ ಬಿಸಿಲಿನ ಝಳದ ಅನುಭವವಾಗುತ್ತಿದೆ ಎನ್ನುತ್ತಾರೆ ತಜ್ಞರು.
ಅಭಿವೃದ್ಧಿ ಹೆಸರಲ್ಲಿ ಕಾಡು ನಾಶ
ಪಶ್ಚಿಮ ಘಟ್ಟಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿತಲೆ ಮಾಡಲಾಗುತ್ತಿದೆ. ಸಮೃದ್ಧ ಜಲರಾಶಿಗಳನ್ನು ತನ್ನೊಡಲಿನಲ್ಲಿ ತುಂಬಿಕೊಂಡಿರುವ ಸಹ್ಯಾದ್ರಿ ಪರ್ವತ ಶ್ರೇಣಿಯೂ ತನ್ನ ತಾಳ್ಮೆ ಕಳೆದುಕೊಳ್ಳುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ.

ಶಿವಮೊಗ್ಗದಲ್ಲಿ ಡಿ.ಆರ್.ಡಿ.ಒ. ಸ್ಥಾಪನೆಗೆ ಒಪ್ಪಿಗೆ, ಕುವೆಂಪು ವಿವಿಗೆ ಭೇಟಿ ನೀಡಿದ ತನಿಖಾ ತಂಡ ಹೇಳಿದ್ದೇನು ಗೊತ್ತಾ?