ಸುದ್ದಿ ಕಣಜ.ಕಾಂ | CITY | HEALTH
ಶಿವಮೊಗ್ಗ: ಹತ್ತು ತಿಂಗಳ ಮಗುವೊಂದಕ್ಕೆ ಕಿಡ್ನಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವಿಶೇಷವೆಂದರೆ, ಇಂತಹ ಶಸ್ತ್ರಚಿಕಿತ್ಸೆ ಮಾಡಿರುವುದು ಮಲೆನಾಡಿನಲ್ಲಿ ಇದೇ ಮೊದಲು.
ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಸ್ಪತ್ರೆಯ ಯುರಾಲಜಿ ವಿಭಾಗದ ಮುಖ್ಯಸ್ಥ ಡಾ. ಪ್ರದೀಪ್, ಎನ್.ಯು.ಕಿಡ್ನಿ ಆಸ್ಪತ್ರೆಯಲ್ಲಿ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ 10 ತಿಂಗಳ ಮಗುವಿಗೆ ಯಶಸ್ವಿಯಾಗಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಿದರು.
10 ತಿಂಗಳ ಮಗು ಹುಟ್ಟಿದಾಗಿನಿಂದ ಬಲಭಾಗದ ಕಿಡ್ನಿ ತೊಂದರೆಯಿಂದ ಬಳಲುತ್ತಿತ್ತು. ಇದರಿಂದ ಬಲಭಾಗದ ಕಿಡ್ನಿ ನಾಳವು ಸಂಕುಚಿತಗೊಂಡು ಮೂತ್ರದ ಹರಿವಿಗೆ ಅಡಚಣೆ ಉಂಟಾಗಿ ಕೆಲಸ ಮಾಡುವುದನ್ನು ಕಡಿಮೆಯಾಗಿತ್ತು. ಈ ತೊಂದರೆಯು ಗರ್ಭಾವಸ್ಥೆಯಲ್ಲಿ ಆರಂಭವಾಗಿ ಹುಟ್ಟಿದ ನಂತರವು ಮುಂದುವರೆಯುವ ಸಾಧ್ಯತೆ ಇರುತ್ತದೆ. ಇದನ್ನು ಪಿಯುಜೆ ಬ್ಲಾಕ್ ಎಂದು ಕರೆಯಲಾಗುತ್ತದೆ. ಇಂತಹ ಸಮಸ್ಯೆಗಳನ್ನು ಸಕಾಲಕ್ಕೆ ಗುರುತಿಸಿ ಚಿಕಿತ್ಸೆ ನೀಡದಿದ್ದರೆ ಆ ಭಾಗದ ಕಿಡ್ನಿಯು ಕ್ರಮೇಣ ನಿಷ್ಕ್ರೀಯವಾಗುತ್ತದೆ ಎಂದು ಹೇಳಿದರು.
ದೊಡ್ಡ ಗಾಯವಿಲ್ಲದೇ ಚಿಕಿತ್ಸೆ
ಈ ರೀತಿಯ ತೊಂದರೆಯಿಂದ ಬಳಲುತ್ತಿರುವ ಮಕ್ಕಳಿಗೆ ದೊಡ್ಡ ಗಾಯವಿಲ್ಲದೆ ಲ್ಯಾಪೆÇ್ರೀಸ್ಕೋಪಿಕ್ ಶಸ್ತ್ರಚಿಕಿತ್ಸೆ ಕೈಗೊಳ್ಳುವುದು ಕಷ್ಟದ ಕೆಲಸ. ಆದರೆ, ವೈದ್ಯರ ತಂಡದಿಂದ ಈ ಸರ್ಜರಿಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಈ ಬಗೆಯ ಶಸ್ತ್ರಚಿಕಿತ್ಸೆ ಮಲೆನಾಡಿನಲ್ಲಿಯೇ ಪ್ರಥಮ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಡಾ.ಪ್ರವೀಣ್ ಮಾರವಾಡಿ, ಡಾ.ಕಾರ್ತಿಕ್, ಡಾ.ಓಂಪ್ರಕಾಶ್ ಉಪಸ್ಥಿತರಿದ್ದರು.
https://www.suddikanaja.com/2021/05/14/banana-stem-entrepreneur/