ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಯುವತಿಯ ಕೈಯಿಂದಲೇ‌ ಮೊಬೈಲು ಕಿತ್ತು ಪರಾರಿಯಾದ ಖದೀಮ, ಒಂದೇ ದಿನ 3 ಮೂರು ಮೊಬೈಲ್ ಕಳವು

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಸಮಯ ಸಾಧಿಸಿ ಖದೀಮನೊಬ್ಬ ಯುವತಿಯ ಕೈಯಿಂದಲೇ‌ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ.

READ | ಅಡಿಕೆ ಬೆಲೆ ಏರಿಕೆ ಬೆನ್ನಲ್ಲೇ ಶಿವಮೊಗ್ಗದಲ್ಲಿ‌ ಹೆಚ್ಚಿದ್ದ ಕಳ್ಳತನದ ಕಾಟ, ಹೊಳೆಹೊನ್ನೂರು ವ್ಯಾಪ್ತಿಯಲ್ಲೇ ಮೂರು‌ ಕೇಸ್ ದಾಖಲು

ಶಿವಮೊಗ್ಗ ನಗರ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ 1ರಲ್ಲಿ‌ ರೈಲಿಗಾಗಿ ಗುರುವಾರ ಮಧ್ಯಾಹ್ನ ಕಾಯುತ್ತ ಕುಳಿತಿದ್ದ ಅಬ್ಬಲಗೆರೆ ಮೂಲದವರು ಎನ್ನಲಾದ ಯುವತಿಯ ಕೈಯಿಂದಲೇ ಮೊಬೈಲ್‌ ಕಸಿದುಕೊಂಡು ಕಳ್ಳ ಎರಡನೇ ಪ್ಲಾಟ್ ಫಾರ್ಮ್ ಕಡೆಗೆ ಓಡಿ ಹೋಗಿದ್ದಾನೆ. ಯುವತಿಯು ಕಳ್ಳ ಎಂದು‌ ಕೂಗಿಕೊಂಡಿದ್ದೇ‌ ಅಲ್ಲಿಯೇ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಆತನಿಗೆ ಅಟ್ಟಿಸಿಕೊಂಡು‌ ಹೋಗಿದ್ದಾರೆ. ಆದರೆ, ಆಗ ವೇಗವಾಗಿ‌ ಓಡಿ‌ ಕಣ್ಮರೆ‌ ಆವಿದ್ದಾ‌ನೆ. ಈ ದೃಶ್ಯಾವಳಿಗಳ ಸಿಸಿ ಕ್ಯಾಮೆರಾದಲ್ಲಿ‌ ಸೆರೆ ಆಗಿರಬಹುದೆಂದು ಹುಡುಕಾಟ ನಡೆದಿದೆ.
ಅದೇ ದಿನ ಬೆಳಗ್ಗೆ ಬೋಗಿಯಲ್ಲೇ ಎರಡು ಮೊಬೈಲ್ ಮಿಸ್
ಬೆಂಗಳೂರಿನಿಂದ ತಾಳಗುಪ್ಪಕ್ಕೆ‌ ತೆರಳುವ ರೈಲಿನಲ್ಲಿ‌ ಆಗಮಿಸಿದ ಇಬ್ಬರು ಪ್ರಯಾಣಿಕರ ಮೊಬೈಲ್ ಬೋಗಿಯಲ್ಲೇ‌ ಕಳ್ಳತನ ಮಾಡಲಾಗಿದೆ. ಶಿವಮೊಗ್ಗಕ್ಕೆ ಇಳಿದು ನೋಡಿದಾಗ ಮೊಬೈಲ್‌ ಇರಲಿಲ್ಲ.

https://www.suddikanaja.com/2021/08/21/gold-smuggling-illegally-seized-in-airport/

error: Content is protected !!