ಸುದ್ದಿ ಕಣಜ.ಕಾಂ | DISTRICT | GANJA DETECTOR
ಶಿವಮೊಗ್ಗ: ಇನ್ಮುಂದೆ ಗಾಂಜಾ ಸೇವಿಸುವವರೆ ಹುಷಾರ್! ಕಾರಣ, ಜಿಲ್ಲೆಯಲ್ಲಿ ಇನ್ಮುಂದೆ ಗಾಂಜಾ ಸೇವಿಸಿದ್ದಾರೆ ಎಂಬ ಅನುಮಾನ ಬಂದರೆ ಅಂತಹವರ ಪರೀಕ್ಷೆ ನಡೆಯಲಿದೆ.
ಮಾದಕ ದ್ರವ್ಯ ವ್ಯಸನಿಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದ ವಿಶೇಷ ಟೆಸ್ಟಿಂಗ್ ಕಿಟ್ ಅನ್ನು ವಿತರಿಸಲಾಗಿದೆ. ಈ ಕಿಟ್ ಸಹಾಯದಿಂದ ಮಾದಕ ದ್ರವ್ಯವನ್ನು ಸೇವನೆ ಮಾಡಿದ ವ್ಯಕ್ತಿಗಳ ಮೂತ್ರವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೂಡಲೇ ಪಾಸಿಟಿವ್, ನೆಗಟಿವ್ ಫಲಿತಾಂಶವನ್ನು ನೀಡುತ್ತದೆ.
READ | ಶಿವಮೊಗ್ಗದಲ್ಲಿ ಗಾಂಧೀಜಿ ಹೆಜ್ಜೆ ಗುರುತು, ಅವರು ನೆಟ್ಟಿದ ಕಲ್ಪತರು, ಮಾತನಾಡಿದ ಜಾಗದಲ್ಲಿ ನೆನಪು ಸದಾ ಹಸಿರು
₹10,000 ದಂಡ, 6 ತಿಂಗಳ ಜೈಲು
ಪರೀಕ್ಷೆ ವೇಳೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದ ವ್ಯಕ್ತಿಗಳ ವಿರುದ್ಧ ಕಲಂ 27(ಬಿ) NDPS ಕಾಯ್ದೆ ಅನ್ವಯ ಪ್ರಕರಣವನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ಕಲಂ ಅಡಿಯಲ್ಲಿ ಆರೋಪಿತರಿಗೆ ₹10,000 ವರೆಗೆ ದಂಡ ಮತ್ತು 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ.
ದೊಡ್ಡಪೇಟೆ ಠಾಣೆಯಲ್ಲಿ ನಡೀತು ಟೆಸ್ಟಿಂಗ್
ಶನಿವಾರ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿದ ಇಬ್ಬರನ್ನು ಪರೀಕ್ಷೆಗೆ ಒಳಪಡಿಸಿದ್ದು, ಸದರಿ ವ್ಯಕ್ತಿಗಳ ಪರೀಕ್ಷಾ ವರದಿಯು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಇವರುಗಳ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಲಾಗಿದೆ.
https://www.suddikanaja.com/2021/08/24/two-accused-arrested-3/