ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ಹಿಂದೂಸ್ತಾನ ಕಾಪರ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಕ್ಟೋಬರ್ 20ರೊಳಗೆ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.
10ನೇ ತರಗತಿ, 12ನೇ ತರಗತಿ ಮತ್ತು ಐಟಿಐ ಪಾಸಾಗಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಭರ್ತಿ ಮಾಡಿದ ಅರ್ಜಿಯನ್ನು ಸ್ವಯಂ ದೃಢೀಕೃತ ಎರಡು ಹೆಚ್ಚುವರಿ ಪಾಸ್ ಪೋರ್ಟ್ ಅಳತೆಯ ಫೋಟೊಗಳೊಂದಿಗೆ Office of Dy. Manager (HR), Taloja Copper Project, E33-36, MIDC, Taloja – 410208 ಕಳುಹಿಸಲು ಸೂಚಿಸಲಾಗಿದೆ.
ಸೆಪ್ಟೆಂಬರ್ 1ಕ್ಕೆ ಅಭ್ಯರ್ಥಿಯ ವಯಸ್ಸು ಗರಿಷ್ಠ 25 ಆಗಿರಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆ ಇದೆ.
ಹುದ್ದೆ ಹೆಸರು | ಹುದ್ದೆ ಸಂಖ್ಯೆ | ತರಬೇತಿ ಅವಧಿ |
ಫಿಟ್ಟರ್ | 05 | 1 ವರ್ಷ |
ಟರ್ನರ್ | 01 | 1 ವರ್ಷ |
ಎಲೆಕ್ಟ್ರಿಷಿಯನ್ | 03 | 1 ವರ್ಷ |
ಲ್ಯಾಬ್ ಅಸಿಸ್ಟೆಂಟ್ | 01 | 1 ವರ್ಷ |
ಒಟ್ಟು | 10 | — |