ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ನಗರ ಉಪ ವಿಭಾಗ 2 ದುರ್ಗಿಗುಡಿ 11 ಕೆವಿ ಮಾರ್ಗವನ್ನು ಭೂಗತ ಕೇಬಲ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಸ್ಪನ್ ಪೋಲ್ ಅಳವಡಿಕೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವೆಂಬರ್ 14ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನಗರ ವ್ಯಾಪ್ತಿಯ ಗಾರ್ಡನ್ ಏರಿಯಾ 1 ರಿಂದ 3ನೇ ಅಡ್ಡ ರಸ್ತೆಗಳು, ಸವಾರ್ ಲೈನ್ ರಸ್ತೆ, ಎಲ್.ಎಲ್.ಆರ್ ರಸ್ತೆ, ಗೋಪಿವೃತ್ತ, ಜೆಪಿಎನ್ ರಸ್ತೆ, ದುರ್ಗಿಗುಡಿ, ಕಾಮಾಕ್ಷಿ ಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
16ರಂದು ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ನವೆಂಬರ್ 16ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ನಗರ ಉಪ ವಿಭಾಗ 2ರ ಘಟಕ 4ರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಯು.ಜಿ ಕೇಬಲ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯ ಆಗಲಿದೆ.
ಬೆಕ್ಕಿನ ಕಲ್ಮಠ, ಕೋಟೆ ರಸ್ತೆ, ಮಾರಿಗದ್ದುಗೆ, ಎಸ್.ಪಿ.ಎಂ.ರಸ್ತೆ, ಒ.ಬಿ.ಎಲ್.ರಸ್ತೆ, ಪೆನ್ಷನ್ ಮೊಹಲ್ಲಾ, ಸಿ.ಎಲ್.ರಾಮಣ್ಣ ರಸ್ತೆ, ಹಳೆ ಪೋಸ್ಟ್ ಆಫೀಸ್ ರಸ್ತೆ, ಲಷ್ಕರ್ ಮೊಹಲ್ಲಾ, ಅರೆದುರ್ಗಮ್ಮನ ಕೇರಿ, ಕೃಷ್ಣ ಕೆಫೆ, ಎಲ್.ಐ.ಸಿ ಆಫೀಸ್ ಹಿಂಭಾಗ, ಕೋಟೆ ಪೊಲೀಸ್ ಠಾಣೆ ರಸ್ತೆ, ಸೈನ್ಸ್ ಫೀಲ್ಡ್ ರಸ್ತೆ, ಸಾಯಿ ಎಕ್ಸ್ ಪೋರ್ಟ್, ಬಿ.ಎಚ್.ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.