ರಸ್ತೆಯ ಗುಂಡಿಯನ್ನು ಮುಚ್ಚಿದ ಪೊಲೀಸರು, ವಿಡಿಯೋ ವೈರಲ್

 

 

ಸುದ್ದಿ‌ ಕಣಜ.ಕಾಂ | CITY | HUMAN INTERESTING
ಶಿವಮೊಗ್ಗ: ಜೈಲು ವೃತ್ತದಿಂದ ನಂಜಪ್ಪ ಆಸ್ಪತ್ರೆಗೆ ತೆರಳುವ ಕುವೆಂಪು ರಸ್ತೆಯಲ್ಲಿನ ಗುಂಡಿಯನ್ನು ಪೊಲೀಸರೇ ಮಣ್ಣು ಹಾಕಿ ಮುಚ್ಚಿದ್ದು, ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.‌ಜೊತೆಗೆ, ಜನರು ಸ್ಮಾರ್ಟ್‌ ಸಿಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

READ | ಲಕ್ಷ್ಮೀ ಟಾಕೀಜ್ ಎದುರು ನಡೀತು ಉರುಳು ಸೇವೆ

ಸ್ಮಾರ್ಟ್‌ ಸಿಟ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಅದನ್ನು ಮುಚ್ಚಲಾಗಿದೆ. ಆದರೆ, ಮಣ್ಣು ಸರಿಯಾಗಿ‌ ಮುಚ್ಚದ ಕಾರಣದಿಂದಾಗಿ ರಸ್ತೆಯಲ್ಲಿ ಗುಂಡಿ ಸೃಷ್ಟಿಯಾಗಿದ್ದು, ನಿತ್ಯ ಜನರು‌ ಹಿಡಿಶಾಪ ಹಾಕುತಿದ್ದಾರೆ. ಹಲವು ವಾಹನ ಸವಾರರು‌ ಬಿದ್ದು ಗಾಯವೂ ಆಗಿದೆ. ಈ ಕಾರಣಕ್ಕಾಗಿ ಸಂಚಾರ ಪೊಲೀಸರು ತಾವೇ ಖುದ್ದು ಮಣ್ಣು ತುಂಬಿಕೊಂಡು ಗುಂಡಿ ಮುಚ್ಚಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸಂಚಾರ ಠಾಣೆ ಎಎಸ್‌.ಐ ಮಂಜುನಾಥ್, ಚಾಲಕ ಪ್ರಕಾಶ್, ಸಿಬ್ಬಂದಿ ಹನುಮಂತಪ್ಪ ಅವರು ಗುಂಡಿಯನ್ನು ಮುಚ್ಚಿದ್ದು ಪ್ರಶಂಸೆಗೆ ಪಾತ್ರವಾಗಿದೆ.

error: Content is protected !!