ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಖಾಸಗಿ ಆನ್ಲೈನ್ ವಹಿವಾಟು ಕಂಪನಿಯೊಂದರ ಹೆಸರಿನಲ್ಲಿ ಲಕ್ಕಿ ಡ್ರಾ ಕಳುಹಿಸಿ ಅದರ ಮೂಲಕ ಅಂದಾಜು ₹42,550 ಮೋಸ ಮಾಡಲಾಗಿದೆ.
ಕುವೆಂಪುನಗರದ ನಿವಾಸಿಯೊಬ್ಬರು ಹಣ ಕಳೆದುಕೊಂಡಿದ್ದಾರೆ. ಅಂಚೆಯ ಲಕ್ಕಿ ಡ್ರಾ ಕೂಪನ್ ಕಳುಹಿಸಿದ್ದು, ಅದರ ಮೇಲೆ ನಮೂದಿಸಿದ್ದ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿಯು ₹9.40 ಲಕ್ಷ ಲಕ್ಕಿ ಡ್ರಾ ಬಂದಿದ್ದು, ಅದಕ್ಕಾಗಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾನೆ.
ಬಹುಮಾನ ಪಡೆಯಬೇಕಾದರೆ ಅದಕ್ಕಾಗಿ ತೆರಿಗೆ ಸಂದಾಯ ಮಾಡುವಂತೆ ಬ್ಯಾಂಕ್ ಖಾತೆ ನಂಬರ್ ವೊಂದನ್ನು ನೀಡಲಾಗಿದೆ. ಅದಕ್ಕೆ ₹4,550, ₹9,400 ಹಾಗೂ ₹28,600 ಫೋನ್ ಪೇ ಮೂಲಕ ಒಟ್ಟು ₹42,550 ಕಳುಹಿಸಿದ್ದಾರೆ. ಆದರೆ, ಯಾವುದೇ ರೀತಿಯ ಬಹುಮಾನದ ಹಣ ಜಮಾ ಆಗಿಲ್ಲ. ಅನುಮಾನಗೊಂಡು ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
https://www.suddikanaja.com/2021/11/11/weaning-off-elephant-calf-from-mother-at-skarebailu-elephant-camp-shivamogga/