ಶಿವಮೊಗ್ಗಕ್ಕೆ ಮತ್ತೆ ಕೊರೊನಾಘಾತ, ಒಂದೇ ಕುಟುಂಬದ ಮೂವರಲ್ಲಿ ಪಾಸಿಟಿವ್, ಸ್ವಿಡನ್‍ನಿಂದ ಬಂದವರಲ್ಲಿ ಸೋಂಕು

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಇಳಿಕೆ ಆಗುತ್ತಲೇ ಇತ್ತು. ಆದರೆ, ಬುಧವಾರ ಏಕಾಏಕಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಂತೆ, ಒಟ್ಟು 19 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಶಿವಮೊಗ್ಗ ತಾಲೂಕಿನದ್ದೇ 11 ಪ್ರಕರಣಗಳಿವೆ.

READ | ಶಿವಮೊಗ್ಗದಲ್ಲಿ ನಾಕಾಬಂದಿ, ತಮಿಳುನಾಡಿಂದ ಬಂದ 25 ಬಸ್, ಎಲ್ಲ ಪ್ರಯಾಣಿಕರಿಗೂ ಸ್ಕ್ರೀನಿಂಗ್, ಹೋಂ‌ ಕ್ವಾರಂಟೈನ್

ಸಾಗರದಲ್ಲಿ ಒಂದೇ ಕುಟುಂಬದಲ್ಲಿ 3 ಪಾಸಿಟಿವ್
ಸಾಗರ ಪಟ್ಟಣದಲ್ಲಿ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಅವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಆದರೂ ಸೋಂಕು ಹೇಗೆ ತಗುಲಿದೆ ಎನ್ನುವುದು ತಿಳಿದುಬಂದಿಲ್ಲ. ಕೋವಿಡ್ ಲಕ್ಷಣಗಳು ಕಂಡುಬಂದಿದ್ದರಿಂದ ಅವರನ್ನು ಪರೀಕ್ಷೆ ಒಳಪಡಿಸಲಾಗಿದ್ದು, ಸೋಂಕು ದೃಢಪಟ್ಟಿದೆ. ಮನೆಯನ್ನು ಮೈಕ್ರೋ ಕಂಟೈನ್ಮೆಂಟ್ ಜೋನ್ ಎಂದು ಪರಿಗಣಿಸಲಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿರುವವರಿಗೂ ಪರೀಕ್ಷೆ ಒಳಪಡಿಸಲಾಗಿದೆ.
ಸ್ವೀಡನ್ ನಿಂದ ಬಂದವರಲ್ಲಿ ಕೊರೊನಾ
ಡಿಸೆಂಬರ್ 29ರಂದು ವ್ಯಕ್ತಿಯೊಬ್ಬರು ಸ್ವಿಡನ್ ನಿಂದ ಬೆಂಗಳೂರು ವಿಮಾನ ನಿಲ್ದಾಣ ಅಲ್ಲಿಂದ ಶಿವಮೊಗ್ಗಕ್ಕೆ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಪಾಸಿಟಿವ್ ಬಂದಿರಲಿಲ್ಲ. ಆದರೆ, ಶಿವಮೊಗ್ಗಕ್ಕೆ ಬಂದ ಬಳಿಕ ಲಕ್ಷಣಗಳು ಆರಂಭವಾಗಿದ್ದು, ಸ್ವಯಂ ಪ್ರೇರಣೆಯಿಂದ ಪರೀಕ್ಷೆಗೆ ಒಳಪಟ್ಟಿದ್ದು, ಪಾಸಿಟಿವ್ ಬಂದಿದೆ. ಅವರನ್ನು ಮೆಗ್ಗಾನ್ ನಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕುವಾರು ಕೊರೊನಾ ಕೇಸ್
ಶಿವಮೊಗ್ಗದಲ್ಲಿ 11, ತೀರ್ಥಹಳ್ಳಿ 1, ಸಾಗರ 5, ಹೊಸನಗ 2 ಪ್ರಕರಣಗಳು ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಪ್ರಸ್ತುತ 45 ಸಕ್ರಿಯ ಪ್ರಕರಣಗಳಿವೆ.

ಕೊರೊನಾ ರಣಕೇಕೆ ಜಿಲ್ಲೆಯಲ್ಲಿ ಮುಂದುವರಿದ ಸಾವಿನ ಆರ್ಭಟ, ಶಿವಮೊಗ್ಗದಲ್ಲಿ ಡಬಲ್, ಹೊಸನಗರದಲ್ಲಿ ಸಿಂಗಲ್ ಸೆಂಚ್ಯೂರಿ