ಸಚಿವ ಅಶ್ವತ್ಥ್ ನಾರಾಯಣ ಮಾಡಿರುವುದರಲ್ಲಿ‌ ತಪ್ಪಿಲ್ಲ, ಗೃಹ ಸಚಿವರ ಸಮರ್ಥನೆ

ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ರಾಮನಗರದಲ್ಲಿ ನಡೆದ ಘಟನೆಯ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ (araga jnanendra) ಪ್ರತಿಕ್ರಿಯೆ ನೀಡಿದರು.
ವೈದ್ಯಕೀಯ ಸಚಿವ ಅಶ್ವತ್ಥ್ ನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ (D.K.Suresh) ಅವರ ನಡುವಿನ ವಾಕ್ಸಮರ, ಜಟಾಪಟಿ ಘಟನೆಯಲ್ಲಿ ಅಶ್ವತ್ಥ್ ನಾರಾಯಣ (C. N. Ashwath Narayan) ಅವರ ತಪ್ಪಿಲ್ಲ ಎಂದು ಹೇಳಿದರು.
ಸಾರ್ವಜನಿಕವಾಗಿ ವೇದಿಕೆಯ ಮೇಲೆ ಗಲಾಟೆ (Quarrel) ಮಾಡಿರುವುದು ಸರಿಯಲ್ಲ. ಸುರೇಶ್ ಅವರಿಗೂ ಮಾತನಾಡುವ ಸಂದರ್ಭ ಬಂದಾಗ ಮಾತಲ್ಲೇ ಉತ್ತರಿಸಬೇಕಿತ್ತು. ಅದನ್ನು ಬಿಟ್ಟು ತೋಳ್ಬಲ‌ ತೋರಿಸಿರುವುದು ಸರಿಯಲ್ಲ ಎಂದರು.

READ | Weekend curfew ಗೆ ಸಚಿವ ಈಶ್ವರಪ್ಪ ವಿರೋಧ, ಅವರು ನೀಡಿದ ಟಾಪ್ 3 ಕಾರಣ ಇಲ್ಲಿವೆ

ತೋಳ್ಬಲ ಕಾಜಕಾರಣ ಅವನತಿಯ ಸಂಕೇತ
ತೋಳ್ಬಲದ ರಾಜಕಾರಣ ಅವನತಿಯ ಸಂಕೇತವಾಗಿದೆ. ತೋಳ್ಬಲದ ರಾಜಕಾರಣ ಈ ಹಿಂದೆಯೇ ಬಿದ್ದಿರುವುದು ಸಾಬೀತಾಗಿದೆ. ಹೀಗಾಗಿ, ಇದರಲ್ಲಿ ಅಶ್ವತ್ಥ್ ನಾರಾಯಣ ಅವರು ತಪ್ಪು ನನಗೆ ಕಾಣುತಿಲ್ಲ ಎಂದು ಅಭಿಪ್ರಾಯ ತಿಳಿಸಿದರು.
ಪ್ರತಿ ಮನೆಗೆ ಹೋಗಿ ಅಹ್ವಾನಿಸಲು ಇದು ಮನೆಯ ಕಾರ್ಯಕ್ರಮ ಅಲ್ಲ. ಇದೇನು ಮದುವೆ ಮನೆಯೇ ಖುದ್ದು ಸಚಿವರೇ ಹೋಗಿ ಕತೆಯಲು,‌ ಜೊತೆಗೆ ಅಧಿಕಾರಿಗಳು ಇನ್ವಿಟೇಷನ್ ನೀಡಿದ್ದಾರೆ‌ ಎಂದರು.

ರಸಗೊಬ್ಬರ ಚಿಲ್ಲರೆ ಮಳಿಗೆಯಲ್ಲೂ ಡಿಜಿಟಲ್ ಪೇಮೆಂಟ್