ಸುದ್ದಿ ಕಣಜ.ಕಾಂ | DISTRICT | WEEKEND CURFEW
ಶಿವಮೊಗ್ಗ: ವೀಕೆಂಡ್ ಕರ್ಫ್ಯೂ (weekend curfew) ನಿರ್ಲಕ್ಷಿಸಿ ಸಂಚರಿಸುತ್ತಿರುವವರಿಗೆ ಪೊಲೀಸ್ ಇಲಾಖೆ (police department ) ದಂಡ ವಿಧಿಸುವ ಮೂಲಕ ಶಾಕ್ ನೀಡುತ್ತಿದೆ. ನಗರದ ವಿವಿಧೆಡೆ ಗಸ್ತಿನಲ್ಲಿರುವ ಪೊಲೀಸರು ಹೊರಗಡೆ ಬರಲು ಸೂಕ್ತ ಸಮಜಾಯಿಷಿ ಹಾಗೂ ದಾಖಲೆಗಳನ್ನು ನೀಡದಿದ್ದರೆ ದಂಡ ವಿಧಿಸಲಾಗುತ್ತಿದೆ.
ವೀಕೆಂಡ್ ಕರ್ಫ್ಯೂ ವಿಡಿಯೋಗಾಗಿ ಕೆಳಗಿನ ವಿಡಿಯೋ ವೀಕ್ಷಿಸಿ (VIDEO REPORT)
ಹಳೇ ಕೇಸಿಗೂ ದಂಡ ವಸೂಲಿ
ಸಿಗ್ನಲ್ ಜಂಪ್ (signal jump), ಟ್ರಾಫಿಕ್ ನಿಯಮ ಉಲ್ಲಂಘನೆ(violation of traffic rules), ಹಿಟ್ ಆಂಡ್ ರನ್ (hit & run) ಸೇರಿದಂತೆ ಇನ್ನ್ಯಾವುದೇ ರೀತಿಯ ಅಪರಾಧಗಳನ್ನು ಎಸಗಿ ದಂಡ ಕಳುಹಿಸಿದರೂ ಪಾವತಿ ಮಾಡದೇ ಇರುವ ವಾಹನ ಸವಾರರಿಗೆ ಕರ್ಫ್ಯೂ ವೇಳೆಯ ದಂಡ (traffic penalty ) ಸೇರಿ ವಸೂಲಿ ಮಾಡಲಾಗುತ್ತಿದೆ.
ಈಗಾಗಲೇ ಮನೆಯ ವಿಳಾಸಕ್ಕೆ ದಂಡದ ರಸೀದಿ ಬಂದರೂ ಅದನ್ನು ಪಾವತಿ ಮಾಡದೇ ನಿರ್ಲಕ್ಷ್ಯ ತೋರಿದ ವಾಹನ ಮಾಲೀಕರ ಮೇಲೆ ದಂಡ ವಿಧಿಸಲಾಗುತ್ತಿದೆ. ಇದೇ ಕಾರಣಕ್ಕಾಗಿ ನಗರದ ಹಲವು ಕಡೆಗಳಲ್ಲಿ ಇಂದು ಪೊಲೀಸರು ಮತ್ತು ವಾಹನ ಮಾಲೀಕರ ನಡುವೆ ವಾಗ್ವಾದವೂ ನಡೆದಿದೆ.