ರಾಷ್ಟ್ರದ 8 ಲಕ್ಷ ವಿದ್ಯಾರ್ಥಿಗಳಲ್ಲಿ ಹೊಳೆಹೊನ್ನೂರಿನ ಅಮೃತಾ ಆಯ್ಕೆ, ಈಕೆ ಗಣರಾಜ್ಯೋತ್ಸವದ ಗೆಸ್ಟ್

 

ಸುದ್ದಿ ಕಣಜ.ಕಾಂ | DISTRICT | TALENT JUNCTION
ಶಿವಮೊಗ್ಗ: ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಎಸ್.ಅಮೃತಾ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Super 25 LIST ಗೆ ಆಯ್ಕೆಯಾದ ಶಿವಮೊಗ್ಗದ ವಿದ್ಯಾರ್ಥಿನಿ ಅಮೃತಾಗೆ ಸಂಸದ ಬಿ.ವೈ.ರಾಘವೇಂದ್ರ ಅಭಿನಂದನೆ, ವಿಡಿಯೋ ವೀಕ್ಷಿಸಿ (VIDEO REPORT)

ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ್ದ ‘ವೀರ್ ಗಾಥಾ’ ಸ್ಪರ್ಧೆಯಲ್ಲಿ ಸೂಪರ್ 25 ಮಕ್ಕಳ ಪಟ್ಟಿಯಲ್ಲಿ ಅಮೃತಾ ಆಯ್ಕೆಯಾಗಿದ್ದು, ಶಿವಮೊಗ್ಗದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಎಂ.ಹೆಗಡೆ ಹೇಳಿದರು.

ರಾಷ್ಟ್ರಮಟದಲ್ಲಿ ಆಯೋಜಿಸಿದ ವೀರ್ ಗಾಥಾ ಸ್ಪರ್ಧೆಯಲ್ಲಿ ಸೂಪರ್ 25 ಮಕ್ಕಳ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಎಸ್.ಅಮೃತಾ ವಿಜೇತರಾಗಿದ್ದಾರೆ. ಇದಕ್ಕೆ ಅಭಿನಂದನೆ.
ಬಿ.ವೈ.ರಾಘವೇಂದ್ರ, ಸಂಸದ

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಇರುವ 4,788 ಸಿಬಿಎಸ್.ಇ ಶಾಲೆಯ 8,03,978 ಮಕ್ಕಳು ವೀರ್ ಗಾಥಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರಲ್ಲಿ 25 ಮಕ್ಕಳು ಗಣರಾಜ್ಯೋತ್ಸವದ ಪ್ರಮುಖ ಅತಿಥಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.
ಶಿಕ್ಷಣ ಇಲಾಖೆ ಸಹಯೋಗದಲ್ಲಿ `ಗ್ಯಾಲೆಂಟ್ರಿ ಅವಾರ್ಡ್ ಪ್ರಶಸ್ತಿ’ ಬಗ್ಗೆ ತಿಳಿವಳಿಕೆಯನ್ನು ದೇಶದ ಮಕ್ಕಳಿಗೆ ನೀಡಲು ಸ್ಪರ್ಧೆ ಹಮ್ಮಿಕೊಂಡಿದ್ದು, ಈ ಬಗ್ಗೆ ಕವನ ರಚನೆ, ಲೇಖನ ಬರಹ, ಚಿತ್ರಕಲಾ ಸ್ಪರ್ಧೆಯಲ್ಲಿ ಅಮೃತಾ 9-10ನೇ ತರಗತಿ ವಿಭಾಗದ ಚಿತ್ರಕಲಾ ವಿಭಾಗದಲ್ಲಿ ವಿಜೇತರಾಗಿದ್ದಾರೆ. ವಿಜೇತರಿಗೆ ರಕ್ಷಣಾ ಇಲಾಖೆಯು 10 ಸಾವಿರ ರೂಪಾಯಿ ನಗದು ಬಹುಮಾನ ನೀಡಲಿದೆ ಎಂದು ತಿಳಿಸಿದರು.
ಅಮೃತಾ ಅವರ ಪೋಷಕರಾದ ಎಂ.ಆರ್.ಶಿವಕುಮಾರ್, ಎಂ.ವಿಜಯಾ, ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ್, ತರಬೇತುದಾರ ಶ್ರೀಧರ್ ಕಂಬಾರ್ ಉಪಸ್ಥಿತರಿದ್ದರು.

https://www.suddikanaja.com/2021/11/22/hosanagara-girl-won-in-national-level-yogasana-competition-organized-by-national-yogasana-sports-federation/