ಸಕ್ರೆಬೈಲು ರಸ್ತೆಯಲ್ಲಿ ಭಾರಿ ಅನಾಹುತ, ಧಗ-ಧಗನೆ ಹೊತ್ತಿ ಉರಿದ ಕಾರು

ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಹೋಟೆಲ್ ಗೆ ಹೋಗಿ ವಾಪಸ್ ಶಿವಮೊಗ್ಗಕ್ಕೆ ಬರುವಾಗ ಕಾರ್ ವೊಂದು ಮರಕ್ಕೆ ಡಿಕ್ಕಿ ಹೊಡೆದು ಯುವಕ ಮೃತಪಟ್ಟಿದ್ದು, ಕಾರು ಧಗ ಧಗನೇ ಉರಿದ ಘಟನೆ ಸಕ್ರೆಬೈಲು ಬಳಿ ಮಂಗಳವಾರ ಸಂಜೆ ನಡೆದಿದೆ.
ವೆಂಕಟೇಶ ನಗರದ ಸನತ್ (25) ಎಂಬುವವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಭದ್ರಾವತಿ ತಾಲೂಕಿನ ಉಜ್ಜನೀಪುರ ಗ್ರಾಮದ ನಿವಾಸಿ ಹನೋಕ್ ಹಾಗೂ ಜನ್ನಾಪುರದ ಋದ್ವಿಕ್ ಅವರು ಗಾಯಗೊಂಡಿದ್ದಾರೆ.

ಮರಕ್ಕೆ ಡಿಕ್ಕಿ ಹೊಡೆದು ಧಗ ಧಗ ಉರಿದ ಕಾರು

ಪೊಲೀಸ್ ಮೂಲಗಳು ಪ್ರಕಾರ, ಮಂಡಗದ್ದೆಯಲ್ಲಿ ಊಟ ಮುಗಿಸಿ ವಾಪಸ್ ಶಿವಮೊಗ್ಗಕ್ಕೆ ತೆರಳುವಾಗ ಘಟನೆ ಸಂಭವಿಸಿದೆ. ಕಾರು ಅತಿ ವೇಗದಿಂದ ಚಲಿಸುತಿತ್ತು. ಆದರೆ, ಬೆಂಕಿ ಹೊತ್ತಿಕೊಳ್ಳಲು ಖಚಿತ ಕಾರಣ ತಿಳಿದುಬಂದಿಲ್ಲ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.