ಸುದ್ದಿ ಕಣಜ.ಕಾಂ | DISTRCIT | WILD LIFE
ಶಿವಮೊಗ್ಗ: ಪಕ್ಷಿ ಪ್ರಪಂಚದ ಬಗ್ಗೆ ಆಸಕ್ತಿ ಹೊಂದಿರುವ ಹಾಗೂ ವನ್ಯಜೀವಿ ಉತ್ಸಾಹಿಗಳಿಗಾಗಿ (wildlife enthusiasts) ಶಿವಮೊಗ್ಗ ಮೃಗಾಲಯ ಒಂದು ವೇದಿಕೆಯನ್ನು ಸೃಷ್ಟಿಸಿದೆ. ಈ ಮೂಲಕ ಪರಿಸರದೆಡೆಗೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ.
READ | ಶಿವಮೊಗ್ಗದಲ್ಲಿ ಹುಲಿ ಗಣತಿ ಆರಂಭ, ಹೇಗೆ ನಡೆಯಲಿದೆ ಗಣತಿ?
ಶಿವಮೊಗ್ಗ ಮೃಗಾಲಯ (shivamogga zoo) ಹಲವು ಪಕ್ಷಿಗಳ ಆವಾಸ ತಾಣವೂ ಆಗಿದೆ. ಇಲ್ಲಿ ಹೇರಳವಾಗಿ ಆಹಾರ ಮತ್ತು ನೀರು ಲಭ್ಯವಿರುವುದರಿಂದ ಪಕ್ಷಿಗಳು ಇಲ್ಲಿ ನೆಲೆಯೂರಿವೆ. ಅವುಗಳನ್ನು ವೀಕ್ಷಿಸುವುದಕ್ಕಾಗಿ ಬರ್ಡ್ ವಾಚಿಂಗ್ ಕ್ಲಬ್ (birdwatching club) ಅನ್ನು ಸ್ಥಾಪಿಸಲಾಗಿದೆ. ವನ್ಯಜೀವಿ ಉತ್ಸಾಹಿಗಳು, ಸ್ಥಳೀಯ ಪಕ್ಷಿ ವೀಕ್ಷಕ(birding)ರನ್ನು ಪರಿಸರದೊಂದಿಗೆ ಸಂಪರ್ಕ ಕಲ್ಪಿಸುವುದೇ ಇದರ ಮೂಲ ಉದ್ದೇಶವಾಗಿದೆ.
ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಭಾನುವಾರದಂದು ಪಕ್ಷಿಗಳ ವೀಕ್ಷಣೆಗೆ ಮೀಸಲು ಇಡಲಾಗಿದ್ದು, ಇದಕ್ಕೆ ಸ್ಪಂದನೆಯೂ ಸಿಕ್ಕಿದೆ.