ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಹೊಳೆಹೊನ್ನೂರು ಉಪ ವಿಭಾಗ ವ್ಯಾಪ್ತಿಯ ಹೊಳೆಹೊನ್ನೂರು, ಕೂಡ್ಲಿಗೆರೆ, ಮಲ್ಲಾಪುರ ಮತ್ತು ಮಾವಿನಕಟ್ಟೆ ವಿ ವಿ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಬಹಳಷ್ಟು ಪಂಪ್ಸೆಟ್ ಫೀಡರ್ ಗಳು ಓವರ್ ಲೋಡ್ ಆಗಿ ಪದೇ ಪದೆ ವಿದ್ಯುತ್ ಮಾರ್ಗಗಳು ಟ್ರಿಪ್ ಆಗುತ್ತಿದ್ದು ವಿದ್ಯುತ್ ವ್ಯತ್ಯಯವಾಗುತ್ತಿದೆ.
READ | ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಕೆ, ಡಿಸಿ ಪರಿಷ್ಕøತ ಆದೇಶ, ಎಲ್ಲಿಯವರೆಗೆ ಇರಲಿದೆ 144, ಏನೇನು ನಿರ್ಬಂಧ
ಈ ಮಾರ್ಗಗಳಲ್ಲಿ ಅನಧಿಕೃತವಾಗಿ ಅಳವಡಿಸಿಕೊಂಡಿರುವ ಪಂಪ್ಸೆಟ್ಗಳಿಂದ ಈ ಸಮಸ್ಯೆ ಆಗುತ್ತಿರುವುದು ಮೆಸ್ಕಾಂ ಗಮನಕ್ಕೆ ಬಂದಿದ್ದು, ಆರ್.ಆರ್. ನಂಬರ್ ಪಡೆದ ಪಂಪ್ಸೆಟ್ ಗ್ರಾಹಕರಿಗೆ ವಿದ್ಯುತ್ ಸರಬರಾಜ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಅನಧಿಕೃತ ಬಳಕೆದಾರರು ಕೂಡಲೇ ತಮ್ಮ ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕಗಳನ್ನು ಸ್ವಯಂ ಸ್ಪೂರ್ತಿಯಿಂದ ತೆಗೆದು ಹಾಕಲು ತಿಳಿಸಿದೆ. ತಪ್ಪಿದಲ್ಲಿ ಮೆಸ್ಕಾಂ ಸೂಕ್ತ ಕ್ರಮ ತೆಗೆದುಕೊಳ್ಳುವುದು.
ಈ ಸಂಬಂಧ ಸಾರ್ವಜನಿಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಮೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://www.suddikanaja.com/2021/03/20/load-shedding-in-mescom-limit-district-due-to-technical-error-in-power-production/