ಭದ್ರಾವತಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ 82 ಕ್ವಿಂಟಾಲ್ ಪಡಿತರ ಅಕ್ಕಿ ಸೀಜ್

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ತಾಲೂಕಿನ ತರಗನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ 82 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.

BDVT FB GROUP LINKಖಚಿತ ಮಾಹಿತಿ ಮೇರೆಗೆ ಹೊಳೆಹೊನ್ನೂರು ಠಾಣೆಯ ಪಿಐ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಮನೆಯೊಂದರ ಮುಂದೆ ಬೀಳಿ ಬಣ್ಣದ ಅಕ್ಕಿಗಳನ್ನು ತುಂಬಿದ ಚೀಲಗಳನ್ನು ಇಡಲಾಗಿತ್ತು. ಎಲೆಕ್ಟ್ರಾನಿಕ್ ತೂಕದ ಯಂತ್ರದಿಂದ ತೂಕ ಮಾಡಲಾಗಿ 40 ಕೆಜಿ ಅಕ್ಕಿ ತುಂಬಿದ 205 ಚೀಲಗಳಿದ್ದು, ಅಂದಾಜು 1,88,600 ರೂಪಾಯಿ ಮೌಲ್ಯದ 205 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಅಕ್ಕಿಯ ಚೀಲಗಳು ಜಾವಳ್ಳಿಯ ಮೋಹನ್ ಎಂಬುವವರಿಗೆ ಸೇರಿರುವುದಾಗಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

error: Content is protected !!