ಇದು ಸಿಟಿಜಿನ್ ವಾಯ್ಸ್ | ಸ್ವಚ್ಚ ಭಾರತದ ಕನಸು ಭಗ್ನ, ಅಧಿಕಾರಿಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ…

ಸುದ್ದಿ ಕಣಜ.ಕಾಂ | TALUK | CITIZEN VOICE
ಶಿವಮೊಗ್ಗ: ಒಂದೆಡೆ ಸ್ವಚ್ಚ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಹಲವು ಪ್ರಯತ್ನಗಳನ್ನು ನಡೆಸಿದೆ. ಅದಕ್ಕೆ ವ್ಯತಿರಿಕ್ತವೆಂಬಂತಿದೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯೊಂದರ ಸ್ಥಿತಿ.
ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗರ ನಗರದಿಂದ ಸ್ವಲವೇ ದೂರದಲ್ಲಿರುವ ಸಣ್ಣ ಮನೆ ಸೇತುವೆ ಬಳಿ ತ್ಯಾಜ್ಯದ ರಾಶಿಯನ್ನೇ ಸುರಿಯಲಾಗಿದೆ. ಕಸ, ಕಡ್ಡಿ, ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಬಾಟಲ್… ವಿವಿಧ ತ್ಯಾಜ್ಯವನ್ನು ಎಸೆಯಲಾಗಿದೆ. ಇದರೆಡೆಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.

READ | ಕಳೆದ 20 ದಿನಗಳಿಂದ ಆಂಬ್ಯುಲೆನ್ಸ್ ಸೇವೆ ಸ್ಥಗಿತ, ಚಿಕಿತ್ಸೆಗಾಗಿ 70 ಕಿ.ಮೀ. ಪ್ರಯಾಣ

ನಗರ ಪ್ರವೇಶಿಸುತ್ತಿದ್ದಂತೆ ಈ ರೀತಿ ಕಸ ಸುರಿದಿರುವುದರಿಂದ ಅಲ್ಲಿನ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆಯಲ್ಲಿ ಈ ಸ್ಥಳಕ್ಕೆ ಕಸ ತಂದು ಸುರಿದು ಹೋಗಲಾಗುತ್ತಿದೆ. ಕಸ ಸಂಗ್ರಹಿಸವುದಕ್ಕೆ ಪ್ರತ್ಯೇಕ ವ್ಯವಸ್ಥೆ ಇದ್ದರೂ ಕಸವನ್ನು ರಸ್ತೆ ಪಕ್ಕದಲ್ಲೇ ವಿಲೇ ಮಾಡಲಾಗುತ್ತಿದೆ. ಅಂತಹವರ ಮೇಲೆ ನಗರಸಭೆ ಅಧಿಕಾರಿಗಳು ದಂಡ ವಿಧಿಸಬೇಕು ಎಂದು ಸ್ಥಳೀಯರೂ ಆದ ವಿನೋಬ ನಗರ ನಿವಾಸಿ ವರುಣ್ ಸಾಗರ್ ಆಗ್ರಹಿಸಿದ್ದಾರೆ.

ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಿಸಾಡಿರುವ ತ್ಯಾಜ್ಯ.

ಪ್ರಿಯ ಓದುಗರೆ, ಜನರ ದನಿಗೆ ದನಿಯಾಗುವ ಪ್ರಯತ್ನ `ಸುದ್ದಿ ಕಣಜ’ ಮಾಡುತ್ತಿದೆ. ನೀವು ನಿಮ್ಮ ವ್ಯಾಪ್ತಿಯಲ್ಲಿ ಇರುವ ಈ ರೀತಿಯ ಸಮಸ್ಯೆಗಳನ್ನು ಬರೆದು ಕಳುಹಿಸಬಹುದು. ಅದನ್ನು ಪ್ರಕಟಿಸಲಾಗುವುದು. ಜೊತೆಗೆ, ನಿಮ್ಮ ದನಿಯನ್ನು ಆಡಳಿತ ವರ್ಗಕ್ಕೆ ತಲುಪಿಸಲಾಗುವುದು.

31 ವಾರ್ಡ್ ವ್ಯಾಪ್ತಿಯಲ್ಲೂ ಕಸ ಸಂಗ್ರಹ
ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್ ಗಳಿವೆ. ಪ್ರತಿ ವಾರ್ಡ್ ಗಳಿಗೂ ನಗರಸಭೆ ವಾಹನಗಳು ಮನೆ ಬಾಗಿಲಿಗೆ ಬರುತ್ತವೆ. ವಾಹನಕ್ಕೆ ಕಸ ಹಾಕುವ ಬದಲು ರಸ್ತೆ ಬದಿ, ಖಾಲಿ ಸೈಟು, ಸಣ್ಣಮನೆ ಸೇತುವೆಯ ಮೇಲ್ಭಾಗದಿಂದ ಎಸೆಯಲಾಗುತ್ತಿದೆ. ಇದರಿಂದಾಗಿ ರೋಗ ರುಜಿನೆಗಳು ಹರಡುತ್ತಿವೆ. ಜೊತೆಗೆ, ಪಟ್ಟಣದ ಸೌಂದರ್ಯಕ್ಕೆ ಕುತ್ತು ತರುತ್ತಿವೆ.
ಸಿಸಿ ಕ್ಯಾಮೆರಾ ಅಳವಡಿಸಲು ಆಗ್ರಹ
ಸಾಗರ ನಗರದ ಹಲವೆಡೆ ಕಸಗಳನ್ನು ಸುರಿಯಲಾಗುತ್ತಿದೆ. ಅಂತಹವರನ್ನು ಪತ್ತೆ ಹಚ್ಚಲು ಸ್ಥಳೀಯ ಆಡಳಿತ, ಶಾಸಕರು ಸಿಸಿ ಕ್ಯಾಮೆರಾ ಅಳವಡಿಸಬೇಕು.
ಯಾರು ಕಸ ತಂದು ಹಾಕುತ್ತಾರೆ ಎಂದು ಇದರಲ್ಲಿ ಗಮನಿಸಬಹುದಾಗಿದೆ. ಹೀಗಾದರೆ, ಜನರು ಎಚ್ಚರಿಕೆಯಿಂದ ವ್ಯವಹರಿಸುವ ಸಾಧ್ಯತೆ ಇದೆ. ಇದರೆಡೆಗೆ ಸ್ಥಳೀಯ ಆಡಳಿತಗಮನ ಹರಿಸಬೇಕು.
– ಸಿಟಿಜನ್ ವಾಯ್ಸ್ | ಸೂರಜ್ ನಾಯರ್

https://www.suddikanaja.com/2021/04/07/bhadravathi-muncipal-election-bjp-released-candidate-list/