ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಲ್ಯಾಪ್ ಟಾಪ್ ಕಳ್ಳರ ಹಾವಳಿ ಮಿತಿಮೀರಿದೆ. ಒಂದೇ ವಾರದಲ್ಲಿ ಬಸ್ ನಲ್ಲಿಟ್ಟಿದ್ದ ಇಬ್ಬರ ಲ್ಯಾಪ್ ಟಾಪ್ ಗಳು ಕಳ್ಳತನ ಮಾಡಲಾಗಿದೆ.
ನಾಗಮಂಗಲದ ನಿವಾಸಿ ವಿದ್ಯಾರ್ಥಿ ಗಗನ್ ಎಂಬಾತನ ಲ್ಯಾಪ್ ಟಾಪ್ ಕಳ್ಳತನ ಮಾಡಿರುವ ಘಟನೆ ನಡೆದಿದೆ.
READ | ಬಸ್ನಲ್ಲಿ ಪ್ರಯಾಣಿಸುವಾಗ ಹುಷಾರ್, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವಾಗ ಇಬ್ಬರ ಲ್ಯಾಪ್ ಟಾಪ್ ಕಳ್ಳತನ
ಶೌಚಕ್ಕೆ ಹೋಗಿ ವಾಪಸ್ ಬರುವ ಹೊತ್ತಿಗೆ ಲ್ಯಾಪ್ ಟಾಪ್ ನಾಪತ್ತೆ
ಗಗನ್ ಅವರು ಸಿರಸಿಯಿಂದ ಚನ್ನರಾಯಪಟ್ಟಣಕ್ಕೆ ಹೋಗುತ್ತಿದ್ದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಸಾರಿಗೆ ಸಂಸ್ಥೆಯ ಬಸ್ ಶಿವಮೊಗ್ಗಕ್ಕೆ ನಿಲ್ದಾಣಕ್ಕೆ ಬಂದಿದ್ದೇ ಅವರು ಶೌಚಾಲಯಕ್ಕಾಗಿ ಬಸ್ ನಿಂದ ಇಳಿದು ಹೋಗಿದ್ದಾರೆ. ವಾಪಸ್ ಬಸ್ ಒಳಗೆ ಬಂದು ನೋಡಲಾಗಿ ಲಗೇಜ್ ಬ್ಯಾಗ್ ಮಾತ್ರ ಇದ್ದು, ಲ್ಯಾಪ್ ಟಾಪ್ ಇರಲಿಲ್ಲ.
ಲ್ಯಾಪ್ ಟಾಪ್ ಬ್ಯಾಗ್ ನಲ್ಲೇನಿತ್ತು?
ಬ್ಯಾಗ್ ನಲ್ಲಿ ಒಂದು ಲೆನವೊ ಲ್ಯಾಪ್ ಟಾಪ್, ಸ್ಯಾಮ್ ಸಂಗ್ ಕಂಪೆನಿಯ ಮೊಬೈಲ್, ಚಾರ್ಜರ್, ಪವರ್ ಬ್ಯಾಂಕ್, ಹೆಡ್ ಫೋನ್, ಡೇಟಾ ಬುಕ್ ಹೀಗೆ ವಿವಿಧ ವಸ್ತುಗಳಿದ್ದವು. ಅದನ್ನು ಕಳ್ಳತನ ಮಾಡಲಾಗಿದೆ. ತಕ್ಷಣ ಗಗನ್ ಅವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
READ | ಪಶು ವೈದ್ಯಕೀಯ ಕಾಲೇಜು ಬಳಿ ಮಾಂಗಲ್ಯ ಕಸಿದುಕೊಂಡು ಪರಾರಿ