ಸುದ್ದಿ ಕಣಜ.ಕಾಂ | KARNATAKA | MARKET RATE
ಬೆಂಗಳೂರು: ನಿರಂತರವಾಗಿ ಏರಿಕೆಯಾಗುತ್ತಿದ್ದ ಬೆಳ್ಳಿಯ ಬೆಲೆಗೆ ವಾರಾಂತ್ಯದಲ್ಲಿ ಬ್ರೇಕ್ ಬಿದ್ದಿದೆ. ಶನಿವಾರ ಪ್ರತಿ ಕೆಜಿಗೆ 200 ರೂಪಾಯಿ ಇಳಿಕೆಯಾಗಿದ್ದು, 73,600 ರೂಪಾಯಿ ನಿಗದಿಯಾಗಿದೆ. ಚಿನ್ನದ ಬೆಲೆಯಲ್ಲಿ ತುಸು ಏರಿಕೆಯಾಗಿದೆ.
ಚಿನ್ನದ ಬೆಲೆ ಸಹ ಇಂದು ಎರಡಂಕಿ ಮಾತ್ರ ಏರಿಕೆ ಕಂಡಿದೆ. ಕಳೆದ ಒಂದು ವಾರದಿಂದ ನಿರಂತರ ಮೂರಂಕಿಯಲ್ಲಿ ದರ ಏರಿಕೆಯಾಗುತಿತ್ತು. ಶನಿವಾರ 24 ಕ್ಯಾರೆಟ್ (ಅಪರಂಜಿ) ಬಂಗಾರದ ಬೆಲೆಯು 52,600 ರೂ. (10 ರೂ. ಏರಿಕೆ) ಹಾಗೂ 22 ಕ್ಯಾರೆಟ್ ಗೆ 48,210 ರೂ. ನಿಗದಿಯಾಗಿದೆ. ಇಂದು 10 ಗ್ರಾಂಗೆ 10 ರೂ. ಹೆಚ್ಚಳವಾಗಿದೆ.
READ | ಬೆಳ್ಳಿಯ ಬೆಲೆಯಲ್ಲಿ ದಾಖಲೆ ಏರಿಕೆ, ಚಿನ್ನವೂ ದುಬಾರಿ
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 18 | 47,450 | 51,770 | 72,900 |
ಮಾರ್ಚ್ 19 | 47,300 | 51,600 | 72,300 |
ಮಾರ್ಚ್ 20 | 47,300 | 51,600 | 72,300 |
ಮಾರ್ಚ್ 21 | 47,400 | 51,700 | 72,500 |
ಮಾರ್ಚ್ 22 | 47,750 | 52.1 | 73,400 |
ಮಾರ್ಚ್ 23 | 47,350 | 51,670 | 71,900 |
ಮಾರ್ಚ್ 24 | 47,950 | 52,310 | 72,800 |
ಮಾರ್ಚ್ 24 | 48,200 | 52,590 | 73,800 |
ಮಾರ್ಚ್ 25 | 48,210 | 52,600 | 73,600 |