ಬೈಕ್ ತಡೆದು ದರೋಡೆ ಮಾಡಿದ ಮೂವರು ಅರೆಸ್ಟ್

Jaya nagar police station

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಬೈಕ್ ಸವಾರ ಒಬ್ಬನನ್ನು ತಡೆದು ದರೋಡೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಒಬ್ಬನು ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬಸವನಗುಡಿಯ ಆಕಾಶ್, ರೈಲ್ವೆ ಕ್ವಾಟರ್ಸ್’ನ ಶೋಬಿತ್, ಚಂದನ್ ಸಾಗರ್ ಎಂಬುವವರನ್ನು ಬಂಧಿಸಲಾಗಿದೆ. ಪುನೀತ್ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಚಿನ್ನದ ಚೈನ್, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಸೀಜ್ ಮಾಡಲಾಗಿದೆ.

READ | ಬೈಕ್ ಅಡ್ಡಗಟ್ಟಿ ಪೋನ್ ಪೇ ಮೂಲಕ ಹಣ ದರೋಡೆ!

ಫೋನ್ ಪೇನಲ್ಲಿ ಹಣ ವರ್ಗಾವಣೆ
ಅಮೀರ್ ಅಹ್ಮದ್ ಕಾಲೋನಿ ಬಳಿ ಖಾಸಗಿ ಕಂಪನಿಯೊಂದರಲ್ಲಿ ನೈಟ್ ಶಿಫ್ಟ್ ಮುಗಿಸಿ ವಾಪಸ್ ಬರುವಾಗ ನಾಲ್ವರು ಬೈಕ್ ತಡೆದಿದ್ದಾರೆ. ಬಳಿಕ ಚಿನ್ನದ ಸರ, 2000 ರೂಪಾಯಿ ನಗದು ಮತ್ತು ಫೋನ್ ಪೇ ಮೂಲಕ 3000 ರೂ. ದೋಚಿದ್ದರು. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!