ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: 2022-23ನೇ ಸಾಲಿನ ಸಮನ್ವಯ ಶಿಕ್ಷಣ ಮಧ್ಯವರ್ತನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಮಂಜೂರಾದ ಬಿಐಇಆರ್.ಟಿ (BIERT Post) ಖಾಲಿ ಇರುವ ಹುದ್ದೆಗಳಿಗೆ ನೇರಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿಗಳನ್ನು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಜೂನ್ 8ರಂದು ಕಚೇರಿ ಸಮಯದೊಳಗೆ ಉಪ ನಿರ್ದೇಶಕರು(ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಶಿವಮೊಗ್ಗ ಇಲ್ಲಿಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
READ | ಶಿವಮೊಗ್ಗದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿಯಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. 2021-22ನೇ ಸಾಲಿನಲ್ಲಿ ನೇರಗುತ್ತಿಗೆಯಡಿಯಲ್ಲಿ ಕೆಲಸ ನಿರ್ವಹಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಪ್ರಾಥಮಿಕ ವಿಭಾಗ ನಿಗದಿಪಡಿಸಿದ ವಿದ್ಯಾರ್ಹತೆ
ಎಸ್.ಎಸ್.ಎಲ್.ಸಿ/ ಪಿಯುಸಿ/ ಎಂಸಿಟಿಟಿ ಮತ್ತು ವಿಶೇಷ ಡಿಇಡಿ
ಪ್ರೌಢ ಶಾಲಾ ವಿಭಾಗ ನಿಗದಿಪಡಿಸಿದ ವಿದ್ಯಾರ್ಹತೆ
ಬಿ.ಎ./ಬಿ.ಎಸ್ಸಿ. ವಿಶೇಷ ಬಿಇಡಿ