ಈಜಲು ಹೋದ ಬಾಲಕ ತುಂಗಾ ನದಿ ಪಾಲು

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ತುಂಗಾ ನದಿ (Tunga river)ಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿದ್ದು, ಆತನ ಹುಡುಕಾಟ ನಡೆದಿದೆ.

READ | ಚಿಕ್ಕಮಗಳೂರು ಡಿಸಿ ಕಚೇರಿಯಲ್ಲಿ ಉದ್ಯೋಗ, ಕೂಡಲೇ ಅರ್ಜಿ ಸಲ್ಲಿಸಿ

ಬಾಪೂಜಿನಗರದ ನಿವಾಸಿ ಚರಣ್(17) ಎಂಬ ಬಾಲಕನು ಸ್ನೇಹಿತನೊಂದಿಗೆ ಸ್ನಾನ ಮಾಡುವುದಕ್ಕಾಗಿ ನದಿಗೆ ತೆರಳಿದ್ದನು. ಈಜುವುದಕ್ಕಾಗಿ ನದಿಗೆ ಇಳಿದಾಗ ಮುಳುಗಿದ್ದಾನೆ. ಸ್ನೇಹಿತರು ಆತನ ರಕ್ಷಣೆಗೆ ಮುಂದಾಗಿದ್ದಾರೆ. ಅಷ್ಟರಲ್ಲಿ ನೀರಿನ ರಭಸಕ್ಕೆ ಹರಿದುಹೋಗಿದ್ದಾನೆ. ಇದುವರೆಗೆ ಬಾಲಕನ ಬಗ್ಗೆ ತಿಳಿದುಬಂದಿಲ್ಲ. ಸುಮಾರು ಹೊತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ನಾಳೆ ಬೆಳಗ್ಗೆಯೂ ಶೋಧ ಕಾರ್ಯ ನಡೆಯಲಿದೆ.

Leave a Reply

Your email address will not be published.