ಶಿವಮೊಗ್ಗ ಡಿಸಿ ಕಚೇರಿಗೆ ಮುತ್ತಿಗೆ, ಕಾಂಗ್ರೆಸ್ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸ್

Congress protest

 

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ (congress protest): ದೇಶದಾದ್ಯಂತ ಕರೆ ನೀಡಿದ ಪ್ರತಿಭಟನೆ ಹಿನ್ನೆಲೆ ಕಾಂಗ್ರೆಸ್ ಮುಖಂಡರು ಶುಕ್ರವಾರ ನಗರದ ಡಿಸಿ‌ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ, ಮುತ್ತಿಗೆ ಹಾಕಲು ಯತ್ನ ನಡೆಸಿದಾಗ ಪೊಲೀಸರು ಬ್ಯಾರಿಕೆಡ್ ಗಳನ್ನು ಅಡ್ಡ ಹಾಕಿ ತಡೆಯಲು‌ ಪ್ರಯತ್ನಿಸಿದರು. ಈ ವೇಳೆ ನಡೆದ‌ ಸಂಘರ್ಷದಲ್ಲಿ ಪೊಲೀಸರು ಪಕ್ಷದ ಮುಖಂಡರನ್ನು ವಶಕ್ಕೆ ಪಡೆದರು.
ಕೇಂದ್ರ ಸರ್ಕಾರ‌ ತನಿಖಾ‌ ಸಂಸ್ಥೆಯಾದ ಜಾರಿ‌ನಿರ್ದೇಶನಾಲಯ (ಇ.ಡಿ)ವನ್ನು‌ ದುರ್ಬಳಕೆ‌ ಮಾಡಿಕೊಳ್ಳುತಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ರಾಜಕೀಯ ದುರುದ್ದೇಶದಿಂದ ಇಡಿ ನೋಟಿಸ್ ನೀಡಲಾಗಿದೆ ಎಂದು ಮುಖಂಡರು ಆರೋಪಿಸಿದ್ದಾರೆ.

READ | ಈಜಲು ಹೋದ ಬಾಲಕ ತುಂಗಾ ನದಿ ಪಾಲು

ಶಾಂತಿಯುತ ಪ್ರತಿಭಟನೆ ಹತ್ತಿಕ್ಕುವ ಯತ್ನ
ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಅದನ್ನು ಹತ್ತಿಕ್ಕಲು ಪೊಲೀಸ್ ಶಕ್ತಿ ಬಳಸಲಾಗಿದೆ. ಎಐಸಿಸಿ ಕಚೇರಿಯೊಳಗೇ ನುಗ್ಗಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಅನಿತಾ ಕುಮಾರಿ, ಎಚ್.ಸಿ. ಯೋಗೇಶ್, ಎಸ್.ಪಿ. ದಿನೇಶ್ ಸೇರಿ‌ ಹಲವರಿದ್ದರು.

https://suddikanaja.com/2021/09/05/tried-for-theft-in-kuvempu-nagar/

Leave a Reply

Your email address will not be published. Required fields are marked *

error: Content is protected !!