ಸುದ್ದಿ ಕಣಜ.ಕಾಂ | DISTRICT | POWER CUT
ಶಿವಮೊಗ್ಗ: ಆರ್.ಎಂ.ಎಲ್ ನಗರದಲ್ಲಿ ಪರಿವರ್ತಕ ಸ್ಥಳಾಂತರಿಸುವ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 19 ರಂದು ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಗಾರ್ಡನ್ ಏರಿಯ 1 ರಿಂದ 3ನೇ ಕ್ರಾಸ್, ಸವರ್ ಲೈನ್ ರಸ್ತೆ, ಬಿ.ಎಚ್.ರಸ್ತೆ, ನೆಹರು ರಸ್ತೆ, ಆರ್.ಎಂ.ಎಲ್.ನಗರ 1 ಮತ್ತು 2ನೇ ಹಂತ, ಟಿಪ್ಪುನಗರ, ಮಂಜುನಾಥ ಬಡಾವಣೆ, ಆನಂದರಾವ್ ಬಡಾವಣೆ, ಬುದ್ಧನಗರ, ಮಾರ್ನಮಿಬೈಲು, ಎನ್.ಟಿ.ರಸ್ತೆ, ಓ.ಟಿ.ರಸ್ತೆ, ಪಂಚವಟಿ ಕಾಲೋನಿ, ಮಂಡ್ಲಿ ಬೈಪಾಸ್, ಭಾರತಿ ಕಾಲೋನಿ, ಪೇಪರ್ ಪ್ಯಾಕೇಜ್, ಪಿಯರ್ ಲೈಟ್, ಇಲಿಯಾಜ್ ನಗರ 1 ರಿಂದ 4ನೇ ತಿರುವು, ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ, ಊರುಗಡೂರು, ಮಿಳಘಟ್ಟ, ನ್ಯೂಮಂಡ್ಲಿ, ಹಳೇಮಂಡ್ಲಿ, ಗಂಧರ್ವನಗರ, ಮುರಾದ್ ನಗರ, ಸವಾಯಿಪಾಳ್ಯ, ಕುರುಬರಪಾಳ್ಯ, ಇಮಾಮ್ ಬಡಾವಣೆ, ದಿಲ್ಲಿ ದರಬಾರ್ ಹೋಟೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪ ವಿಭಾಗ 2ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
READ | ‘ತೂತು ಮಡಿಕೆ’ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್, ಚಿತ್ರದ್ದೇನು ವಿಶೇಷ?
ಪವರ್ ಕಟ್ ದಿನಾಂಕ ಬದಲು
ಜೂನ್ 18ರಂದು ಆಗಬೇಕಿದ್ದ ಹೊಳಲೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯು ಜೂನ್ 19 ರಂದು ನಿರ್ವಹಿಸುವುದರಿಂದ ಅಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಹೊಳಲೂರು, ಮಡಿಕೆಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ ಗ್ರಾಮ ಪಂಚಾಯತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
https://suddikanaja.com/2020/12/17/kuvempu-university-pg-admission/