ಸಿದ್ದರಾಮಯ್ಯ ಹುಚ್ಚಿಗೆ ಪ್ರಪಂಚದಲ್ಲೇ ಔಷಧಿ ಇಲ್ಲ, ಕೆ.ಎಸ್.ಈಶ್ವರಪ್ಪ ಆರೋಪ

ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಶಾಸಕ ಕೆ.ಎಸ್.ಈಶ್ವರಪ್ಪ ಮತ್ತೆ ಆರೋಪಗಳ ಸುರಿಮಳೆಗೈದಿದ್ದಾರೆ.

READ | ಶಿವಮೊಗ್ಗದಲ್ಲಿ‌ ಇನ್ಮುಂದೆ‌ ಮರಳು‌ ಬಳಕೆ‌ ಮೇಲೆ ಹದ್ದಿನ ಕಣ್ಣು

ಕೆ.ಎಸ್.ಈಶ್ವರಪ್ಪ ಮಾಡಿದ ಆರೋಪಗಳಿವು

  • ಸಿದ್ದರಾಮಯ್ಯರ ಹುಚ್ಚು ಬಿಡಿಸಲು ಪ್ರಪಂಚದಲ್ಲೇ ಔಷಧಿ ಇಲ್ಲ. ದೇಶಕ್ಕಾಗಿ ಮೋದಿ ಸೇವೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವಿಶ್ವವೇ ಮೆಚ್ಚುವಂತೆ ಕೆಲಸ ಮಾಡಿದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ವ್ಯಾಕ್ಸಿನ್ ಕೊಟ್ಟಿರುವುದು ಪ್ರಧಾನಿ ಮೋದಿ. ಇದನ್ನು ಬೇರೆ ದೇಶದವರೇ ಮೆಚ್ಚಿಕೊಂಡಿದ್ದಾರೆ. ಸಿದ್ದರಾಮಯ್ಯ ಟೀಕೆಗೆ ಬೆಲೆ ಇಲ್ಲ. ಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡಿದರೆ ನಮ್ಮ ದೇಶದಲ್ಲಿ ಅದಕ್ಕೆ ಔಷಧಿ ಇಲ್ಲ
  • ಕಾಂಗ್ರೆಸ್ ಬೆಂಬಲಿತ ಮಹಾರಾಷ್ಟ್ರ ಸರ್ಕಾರಕ್ಕೂ ಔಷಧಿ ಸಿಗುತ್ತಿದೆ. ರಾಜ್ಯದಲ್ಲೂ ಕೂಡ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೂ ಪೂರ್ಣ ಔಷಧಿ ಕೊಟ್ಟು ಜನ ಓಡಿಸುತ್ತಾರೆ. ಮಹಾರಾಷ್ಟ್ರ ಸರ್ಕಾರ ಪತನವಾಗಲಿದೆ. ಕಾಂಗ್ರೆಸ್ ಮುಟ್ಟಿದವರೆಲ್ಲ ನಾಶವಾಗುತ್ತಿದ್ದಾರೆ

ಪೊಲೀಸರ ಬಗ್ಗೆ ಇನ್ನಷ್ಟು ಭಯ ಹುಟ್ಟಿಸುವ ಅಗತ್ಯವಿದೆ
ಶಿವಮೊಗ್ಗದಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಚಾಕು ಇರಿಯಲಾಗಿದೆ. ಗೂಂಡಾಗಿರಿ ಮಾಡಿದವನ ಕಾಲಿಗೆ ಗುಂಡು ಹೊಡೆದಿರುವುದು ಸ್ವಾಗತಾರ್ಹ ವಿಚಾರ. ಕರ್ತವ್ಯಕ್ಕೆ ಅಡ್ಡಿಪಡಿಸಿದವನಿಗೆ ಸರಿಯಾದ ಪಾಠ ಕಲಿಸಲಾಗಿದೆ. ಪೊಲೀಸರ ಬಗ್ಗೆ ಭಯ ಇದೆ. ಆದರೆ ಪೊಲೀಸರು ಆರೋಪಿಗಳಿಗೆ ಇನ್ನು ಭಯ ಹುಟ್ಟಿಸುವ ಅಗತ್ಯವಿದೆ.

ಅಡಿಕೆಯಲ್ಲಿ ಬೇರು ಹುಳುವಿನ ಬಾಧೆ ಇದೆಯೇ, ಹಾಗಾದರೆ ಅಡಿಕೆ ಸಂಶೋಧನಾ ಕೇಂದ್ರದ ತಜ್ಞರ ಸಲಹೆಗಳನ್ನು ಓದಿ

Leave a Reply

Your email address will not be published.