ಜಾಗ ಅಳತೆ ವಿಚಾರಕ್ಕಾಗಿ ಹಲ್ಲೆಗೈದವರಿಗೆ ಮೂರು ವರ್ಷ ಜೈಲು

 

ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ಹಾರನಹಳ್ಳಿ ಗ್ರಾಮದಲ್ಲಿ ಓಣಿಯನ್ನು ಅಳತೆ ಮಾಡುವಾಗ ಪಕ್ಕದ ಮನೆಯವರೊಂದಿಗೆ ಜಗಳವಾಗಿ ಕುಡುಗೋಲು, ಮರದ ರೀಪರ್ ನಿಂದ ಹಲ್ಲೆ ಮಾಡಿದವರಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಶನಿವಾರ ಆದೇಶಿಸಿದೆ.
ಹಾರನಹಳ್ಳಿ ಗ್ರಾಮದ ನಿವಾಸಿಗಳಾದ ಅತೀಕ್ ಅಹಮ್ಮದ್(34), ಸಿದ್ದಿಕ್ (25), ಶಮ್ಮು (30), ಫೈರೋಜ್ (21), ಖಯೂಮ್ (58) ಅವರಿಗೆ ಶಿಕ್ಷೆಯಾಗಿದೆ. 2015ರಲ್ಲಿ ಸೈಯ್ಯದ್ ಮಜರ್ (58) ಎಂಬಾತನ ಮೇಲೆ ಹಲ್ಲೆ  ಮಾಡಲಾಗಿತ್ತು.

READ | ಶಿವಮೊಗ್ಗ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ 

ಅಪರಾಧಿಗಳಿಗೆ 3 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 10,000 ರೂಪಾಯಿ ದಂಡ ವಿಧಿಸಲಾಗಿದೆ. ಒಂದುವೇಳೆ, ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 3 ತಿಂಗಳು ಸಾದಾ ಕಾರವಾಸ ಶಿಕ್ಷೆ ವಿಧಿಸಲಾಗಿದೆ.
ಕುಂಸಿ ಪೊಲೀಸ್ ಠಾಣೆಯ ಆಗಿನ ಪಿಎಸ್.ಐ ಮಂಜುನಾಥ್ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಜಾಜ್ ಶೀಟ್ ಸಲ್ಲಿಸಿದ್ದರು. ಜಿಲ್ಲಾ ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಧೀಶ ಮುಸ್ತಫಾ ಹುಸೇನ್ ಅವರು ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಪುಷ್ಪಾ ವಾದ ಮಂಡಿಸಿದ್ದರು.

ಬೆಂಕಿಯ ಕಾವಲಿಯಾದ ಶಿವಮೊಗ್ಗ, ಕಾರಿನ ಗಾಜು ಪುಡಿ ಪುಡಿ, ವಾಹನಗಳು ಜಖಂ

Leave a Reply

Your email address will not be published.