ಶಿವಮೊಗ್ಗದಲ್ಲಿ ಮತ್ತೊಂದು ಮರ್ಡರ್’ಗೆ ಸ್ಕೆಚ್

Ambu

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ನಗರದಲ್ಲಿ ಕೊಲೆಗೆ ಸ್ಕೆಚ್ ಸಿದ್ಧವಾಗಿತ್ತು. ಆದರೆ, ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ಅದು ತಪ್ಪಿದಂತಾಗಿದೆ.
ಹೌದು, ಇಂತಹದ್ದೊಂದು ಆಘಾತಕಾರಿ ವಿಚಾರ ತನಿಖೆ ವೇಳೆ ಗೊತ್ತಾಗಿದೆ.
ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆ ಪ್ರಕರಣವೊಂದರ ತನಿಖೆಯ ಸಂದರ್ಭದಲ್ಲಿ ವಿಘ್ನೇಶ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ.

READ | ಕೆಲ ಸೆಕೆಂಡ್‍ಗಳಲ್ಲಿ ಮರ್ಡರ್, ಹಂದಿ ಅಣ್ಣಿ ಕೊಲೆಯ ಬಗ್ಗೆ ತಿಳಿಯಲೇಬೇಕಾದ ವಿಷಯಗಳಿವು

ಖರೀದಿಸಿ ತಂದಿಡಲಾಗಿತ್ತು ಮಾರಕಾಸ್ತ್ರ!
ವಿಘ್ಞೇಶ್ ಎಂಬುವವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಾನು ಮತ್ತು ಚಂದನ್ ಇಬ್ಬರೂ ರೌಡಿ ಶೀಟರ್ ಬಂಕ್ ಬಾಲುವಿನ ಸಹಚರರಾಗಿದ್ದು, ಈ ಹಿಂದೆ ಬಂಕ್ ಬಾಲುವನ್ನು ಅನಿಲ ಅಲಿಯಾಸ್ ಅಂಬು ಮತ್ತು ಸಹಚರರು ಸೇರಿ ಕೊಲೆ ಮಾಡಿದ್ದರು. ಆದ್ದರಿಂದ, ಹೇಗಾದರೂ ಮಾಡಿ ಅನಿಲ ಅಲಿಯಾಸ್ ಅಂಬುನನ್ನು ಹೊಡೆಯುವ ಸಲುವಾಗಿ ನಾನು ಮತ್ತು ಚಂದನ್ ಇಬ್ಬರೂ ಸೇರಿ ಆಯುಧಗಳನ್ನು ಖರೀದಿಸಿ ಸ್ನೇಹಿತನಾದ ಕಿರಣ್ ಕುಮಾರ್ ಅಲಿಯಾಸ್ ಕುಟ್ಟಿ ಈತನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾನೆ. ಜತೆಗೆ, ಕಿರಣ್ ಕೂಡ ಹಣ ಮತ್ತು ವಾಹನದ ವ್ಯವಸ್ಥೆ ಮಾಡುವುದಾಗಿ ಒಪ್ಪಿಕೊಂಡಿದ್ದ ಎಂಬ ವಿಚಾರ ಹೇಳಿದ್ದಾನೆ.
ಇಬ್ಬರು ಆರೋಪಿಗಳ ಬಂಧನ
ಅಂಬು ಮೇಲೆ ಹಲ್ಲೆ ಮಾಡುವುದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಬುದ್ಧನಗರ ನಿವಾಸಿ ವಿಘ್ಞೇಶ್(25), ಓಟಿ ರಸ್ತೆಯ ಕಿರಣ್ ಕುಮಾರ್ ಅಲಿಯಾಸ್ ಕುಟ್ಟಿ(27) ಎಂಬುವವರನ್ನು ಬಂಧಿಸಲಾಗಿದೆ.
ರೌಡಿಶೀಟರ್ ಅನಿಲ ಕೊಲೆಗೆ ಸಂಚು ರೂಪಿಸಿದ ಆರೋಪಿಗಳಾದ ಚಂದನ್, ವಿಘ್ಞೇಶ ಮತ್ತು ಕಿರಣ ಕುಮಾರ್ ಅವರುಗಳ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

https://suddikanaja.com/2022/03/19/gas-cylinder-leakage-in-anupinakatte-residential-school-at-shivamogga/

Leave a Reply

Your email address will not be published. Required fields are marked *

error: Content is protected !!