ಹಂದಿ‌ ಅಣ್ಣಿ ಕೊಲೆಗೈದ ಆರೋಪಿಗಳಿಗೆ ನ್ಯಾಯಾಂಗ ಬಂಧನ

Shivamogga Court

 

 

ಸುದ್ದಿ ಕಣಜ.ಕಾಂ‌ | DISTRICT | CRIME NEWS
ಶಿವಮೊಗ್ಗ: ರೌಡಿಶೀಟರ್ ಹಂದಿ‌ ಅಣ್ಣಿ(Handi anni)ಯನ್ನು ಕೊಲೆಗೈದಿದ್ದ ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ‌ಕಸ್ಟಡಿ‌ ಬುಧವಾರ ಅಂತ್ಯಗೊಂಡಿದ್ದರಿಂದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ‌ ನೀಡಲಾಗಿದೆ.
ಏಳು‌ ದಿನಗಳ‌ ಪೊಲೀಸ್ ಕಸ್ಟಡಿ‌ ಪೂರೈಸಿದ ಎಂಟು ಜನ ಆರೋಪಿಗಳನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಬುಧವಾರ ಬೆಳಗ್ಗೆ ನಗರದ ನಾಲ್ಕನೇ ಜೆಎಂಎಫ್.ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ವಿಚಾರಣೆ ಬಳಿಕ‌ ನ್ಯಾಯಾಂಗ ಬಂಧನಕ್ಕೆ‌ ನ್ಯಾಯಾಲಯ ಆದೇಶಿಸಿದೆ.

READ | ಪೊಲೀಸರ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದ ಮೊಬೈಲ್ ಕಳ್ಳರು, ರಾಶಿ ರಾಶಿ ಮೊಬೈಲ್’ಗಳು ಸೀಜ್

ವಿನೋಬನಗರ ಪೊಲೀಸ್ ಚೌಕಿ ಬಳಿ‌ ದುಷ್ಕರ್ಮಿಗಳು ಹಂದಿ‌ ಅಣ್ಣಿಯನ್ನು ಜುಲೈ 14ರಂದು ಹತ್ಯೆ ಮಾಡಲಾಗಿತ್ತು. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ನಂತರ ಜುಲೈ 19ರಂದು ಚಿಕ್ಕಮಗಳೂರು ಪೊಲೀಸರಿಗೆ ಶರಣಾಗಿದ್ದರು. ಅವರನ್ನು‌ ಶಿವಮೊಗ್ಗ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು‌. ತನಿಖೆಗೋಸ್ಕರ‌ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.
ಬಂಧಿತ ಆರೋಪಿಗಳು
ಕಾಡಾ‌‌ ಕಾರ್ತಿಕ್, ನಿತಿನ್, ಮದನ್ ರಾಯ್, ಮಧು, ಆಂಜನೇಯ, ಫಾರೂಕ್, ಚಂದನ್, ಮಧುಸೂದನ್ ಎಂಬುವವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

https://suddikanaja.com/2022/07/20/handi-anni-murder-case-accused-shivamogga-police-took-into-custody/

Leave a Reply

Your email address will not be published. Required fields are marked *

error: Content is protected !!