ಶಿವಮೊಗ್ಗದಲ್ಲಿ ಮುಂಗಾರು ಚುರುಕು, ಯಾವ ತಾಲೂಕಿನಲ್ಲಿ ಎಷ್ಟು ಮಳೆ?

Heavy rain brings 1

 

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜೂನ್ ತಿಂಗಳಿನಲ್ಲಿ ಮಳೆ ಕೊರತೆಯಾದರೂ ಜುಲೈ ಆರಂಭದಲ್ಲಿಯೇ ಉತ್ತಮ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆ 21.9 ಎಂಎಂ ಮಳೆಗಿಂತ 48.3 (ಶೇ.121) ಅಧಿಕ ವರ್ಷಧಾರೆಯಾಗಿದೆ. ಜೂನ್ ನಲ್ಲಿ ಸರಾಸರಿ ಶೇ.56.8ರಷ್ಟು ಮಳೆ ಕೊರತೆಯಾಗಿತ್ತು.

READ | ಮಲೆನಾಡಿನಲ್ಲಿ ಮಳೆ ಕೊರತೆ, ಎಲ್ಲೆಲ್ಲಿ ಎಷ್ಟು ವರ್ಷಧಾರೆ?

ಜುಲೈ 1ರಿಂದ 4ರವರೆಗೆ ಜಿಲ್ಲೆಯಲ್ಲಿ ಸರಾಸರಿ 476.6 ಎಂಎಂ ಮಳೆಯಾಗಬೇಕು. ಆದರೆ, 329.6 ಎಂಎಂ ವರ್ಷಧಾರೆಯಾಗಿದೆ. ವಾಡಿಕೆಗಿಂತ ಕಡಿಮೆಯಾದರೂ ಕಳೆದ ನಾಲ್ಕು ದಿನಗಳಿಂದ ಮುಂಗಾರು ರೈತರ ಮೊಗದಲ್ಲಿ ನಗೆ ಮೂಡುವಂತೆ ಮಾಡಿದೆ.

ಯಾವ ತಾಲೂಕಿನಲ್ಲಿ ಎಷ್ಟು ಮಳೆ (ಜುಲೈ 1ರಿಂದ 4ರವರೆಗೆ)
ತಾಲೂಕು ವಾಡಿಕೆ ಮಳೆಯಾಗಿದ್ದು ಕೊರತೆ
ಭದ್ರಾವತಿ 127.9 98.4 -23
ಹೊಸನಗರ 838.6 472.3 -44
ಸಾಗರ 606.9 573.4 -6
ಶಿಕಾರಿಪುರ 185.7 99.3 -47
ಶಿವಮೊಗ್ಗ 137.7 105 -24
ಸೊರಬ 305.6 202.7 -42
ತೀರ್ಥಹಳ್ಳಿ 700.9 398.6 -43
ಜಿಲ್ಲೆಯ ಸರಾಸರಿ ಮಳೆ 574.6 329.6 -43

https://suddikanaja.com/2021/09/13/shivamogga-district-rainfall-report/

Leave a Reply

Your email address will not be published. Required fields are marked *

error: Content is protected !!