Good News | ಕೆಳದಿ ಶಿವಪ್ಪ ಕೃಷಿ ವಿಶ್ವವಿದ್ಯಾಲಯದಲ್ಲಿ 23 ಹೊಸ ಕೋರ್ಸ್’ಗಳ ಆರಂಭ

Agriculrue university

 

 

ಸುದ್ದಿ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ಸಾಗರ (sagar) ತಾಲೂಕಿನ ಇರುವಕ್ಕಿ(Iruvakki)ಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ(Keladi Shivappa Nayaka University of Agricultural and Horticultural Sciences-UAHS)ದಲ್ಲಿ 23 ಹೊಸ ಕೋರ್ಸ್ ಗಳನ್ನು ಆರಂಭಿಸಲಾಗುತ್ತಿದೆ ಎಂದು ವಿವಿಯ ನೂತನ ಕುಲಪತಿ ಡಾ.ಆರ್.ಸಿ.ಜಗದೀಶ್ ಘೋಷಿಸಿದರು.
ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿವಿಯ ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದರು.
ದೇಶ- ವಿದೇಶದ ವಿವಿಗಳೊಂದಿಗೆ ಒಡಂಬಡಿಕೆ
ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳ ಜತೆ ಒಡಂಬಡಿಕೆ ಮಾಡಿಕೊಂಡು ವಿದೇಶದಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಸಂಶೋಧನೆ ಮಾಡುವ ನಿಟ್ಟಿನಲ್ಲಿ ಪೂರಕ ವೇದಿಕೆ ಕಲ್ಪಿಸಲಾಗುವುದು.‌ ಅದಕ್ಕಾಗಿಯೇ ಹೊ‌ಸ ಕೋರ್ಸ್ ಆರಂಭಿಸಲಾಗುತ್ತಿದೆ ಎಂದರು‌.

READ | Varamahalakshmi Festival -ವರಮಹಾಲಕ್ಷ್ಮೀ ಹಬ್ಬಕ್ಕೆ ರೇಟ್ ಶಾಕ್!, ದರ ಕೇಳಿದ್ರೆ ಗಾಬರಿಯಾಗೋದು ಗ್ಯಾರಂಟಿ

ವಿವಿ ಜಾಗ ಒತ್ತುವರಿ
ಕೃಷಿ ಮತ್ತು ತೋಟಗಾರಿಕೆ ವಿವಿ ಸ್ಥಾಪನೆಯಾಗಿ 9 ವರ್ಷಗಳಾಗಿದ್ದು, 787 ಎಕರೆ ಭೂಮಿ ಮಂಜೂರಾಗಿದೆ. ಈ ಪೈಕಿ 434 ಎಕರೆ ಮಾತ್ರ ಪೋಡಿಯಾಗಿ ವಿವಿ ವ್ಯಾಪ್ತಿಯಲ್ಲಿದೆ. ಪಕ್ಕಾ ಪೋಡಿಯಾಗಿರುವ ಜಮೀನು ಕೆಲವೆಡೆ ಒತ್ತುವರಿಯಾಗಿದೆ. ಉಳಿದ ಜಮೀನನ್ನು ವಿವಿ ಹೆಸರಿಗೆ ಮಂಜೂರು ಮಾಡುವಂತೆ ಶಾಸಕರು ಮತ್ತು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.
ವಿವಿಯು 39 ಕಿಮೀ ವ್ಯಾಪ್ತಿಯಲ್ಲಿದ್ದು, 18 ಕಿಮೀನಲ್ಲಿ ಮಾತ್ರ ಬೇಲಿ ಹಾಕಲಾಗಿದೆ. ಬೇರೆ ಬೇರೆ ಕಡೆ ಜಮೀನು‌ ನೀಡಿರುವುದರಿಂದ ಉಳಿದ ಜಾಗವನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದರು‌.
ಡಾ.ಎಂ.ಹನುಮಂತ, ಡಾ.ಶಿವಶಂಕರ ಉಪಸ್ಥಿತರಿದ್ದರು.

https://suddikanaja.com/2021/11/26/university-of-agricultural-and-horticultural-sciences-shivamogga-6th-convocation-karnataka-governor-participated-in-program-at-navule-campus/

Leave a Reply

Your email address will not be published. Required fields are marked *

error: Content is protected !!